ಶನಿವಾರ, ಸೆಪ್ಟೆಂಬರ್ 25, 2021
29 °C

ಟಿಪ್ಪು ಸುಲ್ತಾನ್‌ ಸಂಸ್ಮರಣೆ ಪಾಕ್‌ ಪ್ರಧಾನಿ ಗೌರವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಟಿಪ್ಪು ಸುಲ್ತಾನ್‌ ಸಂಸ್ಮರಣೆ ದಿನದಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಟಿಪ್ಪುವಿಗೆ ಗೌರವ ಸೂಚಿಸಿದ್ದಾರೆ. 

‘ಮೇ 4 ಟಿಪ್ಪು ಸುಲ್ತಾನ್‌ ಸಂಸ್ಮರಣೆ ದಿನ. ನಾನು ಟಿಪ್ಪುವಿಗೆ ಗೌರವ ಸಲ್ಲಿಸುತ್ತೇನೆ. ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ ಟಿಪ್ಪು ಗುಲಾಮನಾಗಿ ಬದುಕಲಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮನಾದ’ ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದಾರೆ.

ಟಿಪ್ಪುವನ್ನು ಇಮ್ರಾನ್‌ಖಾನ್‌ ಪ್ರಶಂಸಿಸಿದ್ದು ಇದೇ ಮೊದಲಲ್ಲ. ಫೆಬ್ರುವರಿಯಲ್ಲಿ ಪುಲ್ವಾಮ ದಾಳಿ ನಡೆದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದ ದಿನಗಳಲ್ಲಿ ಅವರು, ಸಂಸತ್ತಿನಲ್ಲಿ ಟಿಪ್ಪುವಿನ ಧೈರ್ಯವನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ: ಪಾಕ್‌ ಪ್ರಧಾನಿಯಿಂದ ಟಿಪ್ಪು ಸ್ಮರಣೆ; ಸಿದ್ದರಾಮಯ್ಯ– ರಾಜೀವ್‌ ಟ್ವೀಟ್‌ ಸಮರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು