ಬುಧವಾರ, ಫೆಬ್ರವರಿ 26, 2020
19 °C

‘ಪಾಕ್‌ ಸಚಿವರಿಗೆ ಅಂಟಿದ ಬೆಕ್ಕಿನ ಕಿವಿಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಫೇಸ್‌ಬುಕ್‌ ಲೈವ್‌ ಮೂಲಕ ಸುದ್ದಿಗೋಷ್ಠಿ ಪ್ರಸಾರವಾಗುತ್ತಿದ್ದ ವೇಳೆ ಪಾಕಿಸ್ತಾನದ ಸಚಿವರಿಗೆ ಬೆಕ್ಕಿನ ಕಿವಿಗಳು ಮತ್ತು ಮೀಸೆಗಳಿರುವ ಎಮೋಜಿ ಅಂಟಿದ್ದು, ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಶನಿವಾರ ಪಾಕಿಸ್ತಾನ ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದ ಸಚಿವ ಶೌಕತ್‌ ಯೂಸುಫ್‌ಝೈ ಮತ್ತು ಇತರ ಸಚಿವರ ಸುದ್ದಿಗೋಷ್ಠಿ ಫೇಸ್‌ಬುಕ್‌ ಲೈವ್‌ನಲ್ಲಿ ಪ್ರಸಾರವಾಗಿದೆ. ಸಚಿವರ ಮುಖದಲ್ಲಿ ಬೆಕ್ಕಿನ ಕಿವಿ ಮತ್ತು ಮೀಸೆ ಇರುವ ಎಮೋಜಿಗಳು ಸ್ವಯಂಚಾಲಿತವಾಗಿ ಕಾಣಿಸಿಕೊಂಡಿವೆ. ಇದು ಸಚಿವರ ಗಮನಕ್ಕೆ ಬಂದಿಲ್ಲ.

ಪಾಕಿಸ್ತಾನದ ನೆಟ್ಟಿಗರು ಈ ವಿಡಿಯೊ ಬಳಸಿಕೊಂಡು ಟ್ರೋಲ್‌ ಮಾಡಿದ್ದಾರೆ. ‘ಯಾರು ಈ ಬೆಕ್ಕುಗಳನ್ನು ಸುದ್ದಿಗೋಷ್ಠಿಗೆ ಬಿಟ್ಟವರು’ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ‘ಸಚಿವರು ಬೆಕ್ಕಿನ ವೇಷದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ’ ಎಂದು ಕಾಲೆಳೆದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು