ವಾಘ್ಮೋರೆ ಖುಲಾಸೆ

7
ಪ್ರತ್ಯಕ್ಷ ಸಾಕ್ಷಿಗಳ ಕೊರತೆ, ತಾಂತ್ರಿಕ ದೋಷದಿಂದ ಆರೋಪ ಮುಕ್ತ

ವಾಘ್ಮೋರೆ ಖುಲಾಸೆ

Published:
Updated:

ವಿಜಯಪುರ:  ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ (ಜ.1, 2012) ಸಂಬಂಧಿಸಿದಂತೆ, ಆರು ಮಂದಿಯನ್ನು ಖುಲಾಸೆಗೊಳಿಸಿ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ, ಶ್ರೀರಾಮಸೇನೆಯ ಕಾರ್ಯಕರ್ತ ಪರಶು
ರಾಮ ವಾಘ್ಮೋರೆ ಸಹ ಈ ಪ್ರಕರಣ ದಲ್ಲಿ ಆರೋಪಿಯಾಗಿದ್ದ. ಇದೇ ಸಂಘಟನೆಯ ಅನಿಲಕುಮಾರ, ಶ್ರೀರಾಮ ಸೋಲಂಕರ, ಮಲ್ಲನಗೌಡ ಪಾಟೀಲ, ರೋಹಿತ್ ನಾವಿ, ಸುನೀಲ ಅಗಸರ ಸಹ ಖುಲಾಸೆಯಾಗಿದ್ದಾರೆ.

‘ಪೊಲೀಸರ ತನಿಖೆಯಲ್ಲಿ ತಾಂತ್ರಿಕ ದೋಷವಿರುವುದನ್ನು ನ್ಯಾಯಾಧೀಶರ ಗಮನಕ್ಕೆ ತರಲಾಗಿತ್ತು. ನ್ಯಾಯಾ
ಧೀಶರಾದ ಕೆ.ಬಿ.ಗೀತಾ, ತಾಂತ್ರಿಕ ದೋಷ ಪರಿಗಣಿಸಿ ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟರು’ ಎಂದು ಆರೋಪಿಗಳ ಪರ ವಕೀಲ ಎಸ್‌.ಎಚ್.ಲಗಳಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 4

  Sad
 • 1

  Frustrated
 • 4

  Angry

Comments:

0 comments

Write the first review for this !