ಇಹದ ಪರಿಮಳ

7

ಇಹದ ಪರಿಮಳ

Published:
Updated:
Deccan Herald

ಈ ಕಾಯಕ್ಕೊಂದು ಗಡಿಯಾರವಿದೆ
ಅದು ಮನಸ್ಸಿನದೋ ಕಾಯದ್ದೋ?
ಬಿಡಿಸಲಾಗದ ಒಗಟು
ಅಂದರೆ ಅದು ಭೂಮಿತತ್ವದ ಬಿತ್ತ

ದುಡಿ ದುಡಿದು ಹಣ್ಣಾದ ದೇಹಕ್ಕೆ
ಕಣ್ಣುಮುಚ್ಚಿ ಕಾಪಾಡುವ ನಿರಾಯಾಸ
ದುಡಿಮೆಯೇ ದೇವರೆನ್ನುವ ಮನಕ್ಕೆ
ಕಣ್ಣು ತೆರೆದು ಹರಸುವ ಮನೋಲ್ಲಾಸ

ಗಡಿಯಾರವಿರುವುದು ಸುತ್ತುವುದಕ್ಕೆ
ಕೇಂದ್ರದಲ್ಲಿನ ಕೊಂಡಿ ಹಿಡಿದಿಟ್ಟು
ಪರಿಧಿಯಂಚಿನ ಸಂಖ್ಯೆಗಳ ಮುಟ್ಟುವುದಕ್ಕೆ
ದುಡಿಯುವುದು ಬಂಡಿ ಹುಟ್ಟುಗೆಟ್ಟು

ಗಂಟೆಯ ನೆಂಟನೆ ಓ ಗಡಿಯಾರ
ನಾನೆನ್ನುವುದೇನಿದೆ ಎಲ್ಲ ಬಡಿವಾರ
ಆದಿಯು ಇಲ್ಲ ಅಂತ್ಯವೂ ಇಲ್ಲ
ಸೋಲು ಗೆಲುವಿನ ಸೊಲ್ಲೂ ಇಲ್ಲ

ಕಾಯದ ನಿಯತಿಯು ಕಾಲದ ಗೆಲ್ಲು
ಮನದಾ ಜತೆಯದು ಜೀವದ ಸೊಲ್ಲು
ಗೆದ್ದವ ಸೋತ ಸೋತವ ಸತ್ತ
ಹೂತವನುಸಿರೇ ಇಹದಾ ಪರಿಮಳ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !