ಮೋದಿ ಭೇಟಿ ಮುನ್ನ ಡೆಹರಾಡೂನ್ ಅರಣ್ಯ ಸಂಶೋಧನಾ ಸಂಸ್ಥೆ ಮಂಗ, ಹಾವು ಮುಕ್ತ

7
ಯೋಗ ದಿನಾಚರಣೆ

ಮೋದಿ ಭೇಟಿ ಮುನ್ನ ಡೆಹರಾಡೂನ್ ಅರಣ್ಯ ಸಂಶೋಧನಾ ಸಂಸ್ಥೆ ಮಂಗ, ಹಾವು ಮುಕ್ತ

Published:
Updated:
Narendra Modi

ಉತ್ತರಾಖಂಡ: ಜೂನ್ 21 ಅಂತರರಾಷ್ಟ್ರೀಯ  ಯೋಗ ದಿನಾಚರಣೆ ಪ್ರಯುಕ್ತ ಡೆಹರಾಡೂನ್‍ನ ಅರಣ್ಯ ಸಂಶೋಧನಾ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ಭೇಟಿಗೆ ಪೂರ್ವ ತಯಾರಿ ಮಾಡಿಕೊಂಡಿರುವ ಉತ್ತರಾಖಂಡ ಅರಣ್ಯ ಇಲಾಖೆ, ಪ್ರಸ್ತುತ ಸಂಸ್ಥೆಯ ಪರಿಸರವನ್ನು ಮಂಗ ಮತ್ತು ಹಾವು ಮುಕ್ತವಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಅರಣ್ಯ ಸಂಶೋಧನಾ ಸಂಸ್ಥೆ ನೆಲೆಗೊಂಡಿರುವ ಪ್ರದೇಶವನ್ನು ಹಾವು ಮುಕ್ತವಾಗಿಸಿ ಸುರಕ್ಷಿತ ಪ್ರದೇಶವನ್ನಾಗಿ ಮಾಡಿ ಎಂದು ಡೆಹರಾಡೂನ್ ಜಿಲ್ಲಾ ಮೆಜಿಸ್ಟ್ರೇಟ್ ಎಸ್.ಎ ಮುರುಗೇಶನ್ ಅರಣ್ಯ ಇಲಾಖೆಗೆ ಕಳೆದ ವಾರ ಆದೇಶ ನೀಡಿದ್ದರು.
ಆ ಪ್ರದೇಶವನ್ನು ಮಂಗ, ಹಾವುಗಳಿಂದ ಮುಕ್ತಗೊಳಿಸುವುದರ ಜತೆಗೆ ಎಲೆಯುದುರಿಸುವ ಮರಗಳಿಂದ ಮುಕ್ತವಾಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನಾನು ಅರಣ್ಯ ಇಲಾಖೆಗೆ ಆದೇಶಿಸಿದ್ದೇನೆ ಎಂದು ಮುರುಗೇಶನ್ ಹೇಳಿದ್ದಾರೆ.

ದಟ್ಟ ಅರಣ್ಯ ಪ್ರದೇಶದಲ್ಲಿರುವ ಈ ಸಂಸ್ಥೆಯ ಕ್ಯಾಂಪಸ್‍ನಲ್ಲಿ ಯೋಗ ದಿನಾಚರಣೆಯಂದು ಪಾಲ್ಗೊಳ್ಳುವ ಜನರಿಗೆ ಯಾವುದೇ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸಿದ್ದೇವೆ. ಇಲ್ಲಿಯವರೆಗೆ ನಾವು ಎರಡು ಹಾವುಗಳನ್ನು ಹಿಡಿದಿದ್ದು ಅದನ್ನು ಬೇರಡೆಗೆ ಬಿಡಲಾಗಿದೆ ಎಂದು ಡೆಹರಾಡೂನ್‍ನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‍ಒ) ರಾಜೀವ್ ಧಿಮನ್ ಹೇಳಿದ್ದಾರೆ.

ಯೋಗ ಕಾರ್ಯಕ್ರಮ ನಡೆಯುವ ಈ ಪ್ರದೇಶದಲ್ಲಿ ಮಂಗಗಳು ಇಲ್ಲ. ಕಾರ್ಯಕ್ರಮ ಮುಗಿಯುವವರೆಗೆ ಯಾವುದೇ ಪ್ರಾಣಿಗಳು ಇಲ್ಲಿ ಸುಳಿದಾಡದಂತೆ ಎಚ್ಚರವಹಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಇಲ್ಲಿ ನಿಯೋಜಿಸಲಾಗುವುದು ಎಂದಿದ್ದಾರೆ ಧಿಮನ್.
 

ಬರಹ ಇಷ್ಟವಾಯಿತೆ?

 • 19

  Happy
 • 9

  Amused
 • 3

  Sad
 • 4

  Frustrated
 • 14

  Angry

Comments:

0 comments

Write the first review for this !