3
ಮಾನವ ಸಂಪನ್ಮೂಲ, ವಿದ್ಯುತ್ ಸರಬರಾಜು ಕೋರಿ

ಮದ್ರಾಸ್ ಹೈಕೋರ್ಟ್‌ ಮೊರೆ ಹೋದ ಸ್ಟೆರ್‌ಲೈಟ್ ಕಂಪೆನಿ

Published:
Updated:

ಚೆನ್ನೈ: ತೂತುಕುಡಿಯಲ್ಲಿರುವ ವೇದಾಂತ ಸಮುಹದ ಸ್ಟೆರ್‌ಲೈಟ್ ಕಾಪರ್ ಕಂಪನಿ ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದು, ಕಾರ್ಖಾನೆ ನಡೆಸಲು ಅವಶ್ಯಕವಾದ ಮಾನವ ಸಂಪನ್ಮೂಲ ಹಾಗೂ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಮಾಡಿದೆ. 

ಕಾರ್ಖಾನೆಯಲ್ಲಿ ಸೋರಿಕೆಯಾಗಿರುವ ಗಂಧಕಾಮ್ಲ ಸ್ವಚ್ಛಗೊಳಿಸುವ ಕಾರ್ಯ ಜೂನ್ 18ರಿಂದ ಪ್ರಾರಂಭವಾಗಿದೆ. ಕಾರ್ಖಾನೆಗೆ ಸಿಬ್ಬಂದಿ, ಹಾಗೂ ವಿದ್ಯುತ್  ಅಗತ್ಯತೆ ಇದೆ ಎಂದು ಮಧುರೈ ಪೀಠಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ ನಂದೂರಿ, ಸ್ಥಳೀಯರ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಭರವಸೆ ನೀಡಿದರು.  

ಕಳೆದ ತಿಂಗಳು ಸ್ಟೆರ್‌ಲೈಟ್ ಕಂಪೆನಿ ವಿರುದ್ಧ ಸ್ಥಳಿಯರು ಕೈಗೊಂಡ ಪ್ರತಿಭಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದರು. 
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !