'ಆರೋಗ್ಯವೆ ಭಾಗ್ಯವಾಗಲಿ'

7

'ಆರೋಗ್ಯವೆ ಭಾಗ್ಯವಾಗಲಿ'

Published:
Updated:
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್‌ ಸೇವೆಗಳ ಇಲಾಖೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಕಾರ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪುರ, ಬಿಬಿಎಂಪಿಯ ಮಹಾಪೌರ ಸಂಪತ್ ರಾಜ್ ,ವಿಧಾನ‌ ಪರಿಷತ್ ಸದಸ್ಯ ಡಿ.ಎ.ಶರವಣ, ಶ್ವಾಸ ಗುರು ವಚನಾನಂದ ಸ್ವಾಮೀಜಿ, ವಿದೇಶದ ಅಂತರರಾಷ್ಟ್ರೀಯ ಯೋಗ ಸ್ವಾಮೀಜಿಗಳು ಇದ್ದರು

ಬೆಂಗಳೂರು: 'ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಯೋಗಾಭ್ಯಾಸ ನಡೆಯಬೇಕು. ಆರೋಗ್ಯವೆ ನಮ್ಮ ಭಾಗ್ಯವಾಗಬೇಕು' ಎಂದು ಸಹಕಾರ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್‌ ಸೇವೆಗಳ ಇಲಾಖೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

'ನಮ್ಮ ಗಡಿಬಿಡಿ ಬದುಕಿನ ವ್ಯವಸ್ಥೆಯನ್ನು ಬದಲಿಸಿಕೊಂಡು, ನಿತ್ಯವೂ ಕನಿಷ್ಟ 45 ನಿಮಿಷ ಯೋಗ ಮಾಡಬೇಕು. ಇರುವಷ್ಟು ಕಾಲ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಜೀವನ ನಡೆಸಬೇಕು' ಎಂದು ಅವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ‌ಪಾಟೀಲ ಮಾತನಾಡಿ, 'ಯೋಗವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಬೇಕಾದ ಎಲ್ಲ ಪ್ರಮಾಣಿಕ ಕಾರ್ಯವನ್ನು ಆಯುಷ್ ಇಲಾಖೆ ಮಾಡಲಿದೆ' ಎಂದು ಭರವಸೆ ನೀಡಿದರು.

ವಿಧಾನ‌ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, '2020ರ ವೇಳೆಗೆ ಪ್ರಪಂಚದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಅಗ್ರಸ್ಥಾನದಲ್ಲಿ ನಿಲ್ಲಬೇಕು ಎಂದು ಹೇಳಿದ ಅಬ್ದುಲ್ ಕಲಾಂ ಅವರ ಕನಸು, ಇದೀಗ ಯೋಗದ ಹೆಸರಿನಲ್ಲಿ ಪ್ರಧಾನಿ ಮೋದಿ ಅವರ ಮೂಲಕ ಭಾರತ ಅಗ್ರಸ್ಥಾನದಲ್ಲಿ ನಿಂತಿದೆ' ಎಂದು ಹೇಳಿದರು.

ಬಿಬಿಎಂಪಿಯ ಮಹಾಪೌರ ಸಂಪತ್ ರಾಜ್ ಮಾತನಾಡಿ, 'ಸಾರ್ವಜನಿಕರು ಎಲ್ಲ ವಾರ್ಡಗಳಲ್ಲಿ ಯೋಗ ಕೇಂದ್ರ ಸ್ಥಾಪನೆ ಮತ್ತು ಉದ್ಯಾನಗಳಲ್ಲಿ ಯೋಗ ಮಾಡಲು ಸ್ಥಳಾವಕಾಶ ಕಲ್ಪಿಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಬಜೆಟ್ ನಲ್ಲಿ ಹಣ ಬಿಡುಗಡೆಯಾಗಲಿದೆ' ಎಂದು ಅವರು ಹೇಳಿದರು.

ವಿಧಾನ‌ ಪರಿಷತ್ ಸದಸ್ಯ ಡಿ.ಎ.ಶರವಣ, ಶ್ವಾಸ ಗುರು ವಚನಾನಂದ ಸ್ವಾಮೀಜಿ, ವಿದೇಶದ ಅಂತರರಾಷ್ಟ್ರೀಯ ಯೋಗ ಸ್ವಾಮೀಜಿಗಳು ಇದ್ದರು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !