ರಾಜ್ಯದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಶೇ 11.01 ರಷ್ಟು ಮತದಾನ

ಸೋಮವಾರ, ಮೇ 27, 2019
24 °C

ರಾಜ್ಯದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಶೇ 11.01 ರಷ್ಟು ಮತದಾನ

Published:
Updated:

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು ಬೆಳಗ್ಗೆ 10 ಗಂಟೆಯ ವೇಳೆಗೆ ಶೇ 11.01 ರಷ್ಟು ಮತದಾನವಾಗಿದೆ. 

ಬೆಳಗ್ಗೆ 9 ಗಂಟೆಯ ವೇಳೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ 4.58 ರಷ್ಟು ಮತದಾನವಾಗಿತ್ತು. 9 ಗಂಟೆಯ ಬಳಿಕ ಬಿರುಸಿನ ಮತದಾನ ನಡೆಯುತ್ತಿದ್ದು 10 ಗಂಟೆಯ ಸುಮಾರಿಗೆ ಶೇ 11.01ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಮೂಲಗಳು ತಿಳಿಸಿವೆ. 

ಬೆಳಗ್ಗೆ 9 ಗಂಟೆ ಸುಮಾರಿಗೆ ದಾಖಲಾಗಿರುವ ಶೇಕಡವಾರು ಮತದಾನ

ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಶೇ 7.79% ಮತದಾನವಾಗಿದೆ. ಮಡಿಕೇರಿ- 12.17, 
ವಿರಾಜಪೇಟೆ- 12.67, ಪಿರಿಯಾಪಟ್ಟಣ- 10.0, ಹುಣಸೂರು- 7.55, ಚಾಮುಂಡೇಶ್ವರಿ- 5:81, ಕೃಷ್ಣರಾಜ- 3.5, ಚಾಮರಾಜ- 8.2, ನರಸಿಂಹರಾಜದಲ್ಲಿ ಶೇ. 4.58 ರಷ್ಟು ಮತದಾನವಾಗಿದೆ. 

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ಗಂಟೆಗೆ ಸುಮಾರಿಗೆ ಶೇ 6.82ರಷ್ಟು ಮತದಾನಗಿದೆ. ಕಡೂರು–6.94, ಶ್ರವಣಬೆಳಗೋಳ–8.03, ಆರಸಿಕೇರೆ–7.5, ಬೇಲೂರು–8.51, ಹಾಸನ–6.22, ಹೊಳೇನರಸಿಪುರದಲ್ಲಿ ಶೇ 2.35ರಷ್ಟು ಮತದಾನವಾಗಿದೆ. 

ಚಿಕ್ಕಬಳ್ಳಾಪುರದಲ್ಲಿ ಶೇ 5.59% ರಷ್ಟು ಮತದಾನವಾಗಿದೆ. ಗೌರಿಬಿದನೂರು - 4.55, ಬಾಗೇಪಲ್ಲಿ - 5.2, ಚಿಕ್ಕಬಳ್ಳಾಪುರ - 4.99, ಯಲಹಂಕ - 5.66, ಹೊಸಕೋಟೆ - 8.15, ದೇವನಹಳ್ಳಿ- 3.8, ದೊಡ್ಡಬಳ್ಳಾಪುರ- 5.18, ನೆಲಮಂಗಲ- 6.99 ರಷ್ಟು ಮತದಾನವಾಗಿದೆ. 

ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಶೇ 5.8ರಷ್ಟು ಮತದಾನವಾಗಿದೆ. ಮೊಳಕಾಲ್ಮೂರು ಕ್ಷೇತ್ರ -5.39, ಚಳ್ಳಕೆರೆ ಕ್ಷೇತ್ರ -4.53, ಚಿತ್ರದುರ್ಗ ಕ್ಷೇತ್ರ -7.13, ಹಿರಿಯೂರು ಕ್ಷೇತ್ರ -4.91, ಹೊಸದುರ್ಗ ಕ್ಷೇತ್ರ -5.99, ಹೊಳಲ್ಕೆರೆ ಕ್ಷೇತ್ರ -5.47, ಸಿರಾ ಕ್ಷೇತ್ರ -6.66, ಪಾವಗಡ ಕ್ಷೇತ್ರ -4.29 ರಷ್ಟು ಮತದಾನವಾಗಿದೆ. 

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬೆಳಿಗ್ಗೆ 9.30ರ ಸುಮಾರಿಗೆ ಶೇ 12.59 ರಷ್ಟು ಮತದಾನವಾಗಿದೆ.  ಕುಂದಾಪುರ 13.45, ಉಡುಪಿ 15,  ಕಾಪು15.90, ಕಾರ್ಕಳ15.44, ಶೃಂಗೇರಿ 12.78, ಮೂಡಿಗೆರೆ 9.33, ಚಿಕ್ಕಮಗಳೂರು 10.17 ಹಾಗೂ 
ತರೀಕೆರೆಯಲ್ಲಿ ಶೇ 8.34 ರಷ್ಟು ಮತದಾನವಾಗಿದೆ. 

ಚಾಮರಾಜನಗರ ಲೋಕಸಭಾ ಕ್ಷೇತ್ರದದಲ್ಲಿ 9 ಗಂಟೆ ವೇಳೆಗೆ ಶೇ.10.18%ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದ್ದು, ಬೆಳಿಗ್ಗೆ 9ರ ವೇಳೆಗೆ ಶೇ 5.93 ರಷ್ಟು ಮತದಾನವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !