ದೇವೇಗೌಡರನ್ನು ಗೆಲ್ಲಿಸದಿದ್ರೆ ರಾಜೀನಾಮೆ ಕೊಡುವೆ: ಫೇಸ್‌ಬುಕ್ ಪೋಸ್ಟ್ ವೈರಲ್

ತುಮಕೂರು: ’ಮಾಜಿ ಪ್ರಧಾನಿ ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುವೇ, ಇಲ್ಲವಾದಲ್ಲಿ ರಾಜೀನಾಮೆ ಪತ್ರದೊಂದಿಗೆ ಬರುವೆ’ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವರೂ ಆಗಿರುವ ಎಸ್.ಆರ್.ಶ್ರೀನಿವಾಸ್ ಅವರ ಫ್ಯಾನ್ ಕ್ಲಬ್ ಫೇಸ್‌ಬುಕ್ ಖಾತೆಯಲ್ಲಿ ಈ ಪೊಸ್ಟ್ ಅನ್ನು ಹಾಕಲಾಗಿದೆ. ‘ಎಸ್.ಆರ್.ಶ್ರೀನಿವಾಸ್ ಗುಬ್ಬಿ ಕ್ಯಾಬಿನೇಟ್ ಮಿನಿಸ್ಟರ್ ಎಫ್‌ಸಿ’ ಎಂಬುದು ಆ ಫೇಸ್‌ಬುಕ್ ಖಾತೆಯ ಹೆಸರು.
’ದೊಡ್ಡಗೌಡರನ್ನು ಗೆಲ್ಲಿಸಿಕೊಂಡು ಬರ್ತೀನಿ, ಇಲ್ಲ ಅಂದ್ರೆ ನನ್ನ ರಾಜೀನಾಮೆ ಪತ್ರದ ಜೊತೆ ಬರ್ತೀನಿ’ ಎಂಬ ಪೋಸ್ಟ್ ಇದ್ದು, ಇದರ ಅಡಿಯಲ್ಲಿ ’ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುವಂತೆ ಕುಮಾರಣ್ಣಗೆ ವಾಗ್ದಾನ ಮಾಡಿದ ಮಿನಿಸ್ಟರ್ ವಾಸಣ್ಣ (ಶ್ರೀನಿವಾಸ್) ಎಂದು ಬರೆಯಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
28 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿರುವ ಈ ಫೇಸ್‌ಬುಕ್ ಖಾತೆಯಲ್ಲಿರುವ ಪೋಸ್ಟ್ ಅನ್ನು ಹಲವರು ಹಂಚಿಕೊಂಡಿದ್ದಾರೆ. ಕೆಲವರು ಮಾತು ಅಂದ್ರೆ ಮಾತು, ಅದೇ ವಾಸಣ್ಣನ ಗತ್ತು. ದೇವೇಗೌಡರ ಗೆಲುವು ನಿಶ್ಚಿತ, ಬನ್ನಿ ಒಟ್ಟಾಗಿ ಶ್ರಮಿಸೋಣ, ಸಂಭವಾಮಿ ಯುಗೇ ಯುಗೇ... ಎಂದು ಕೆಲವರು ಬರೆದುಕೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.