ಪಿಗ್ಗಿಗೆ ಹುಟ್ಟುಹಬ್ಬದಂದೇ ನಿಕ್‌ ಪ್ರೇಮನಿವೇದನೆ

7

ಪಿಗ್ಗಿಗೆ ಹುಟ್ಟುಹಬ್ಬದಂದೇ ನಿಕ್‌ ಪ್ರೇಮನಿವೇದನೆ

Published:
Updated:
Deccan Herald

ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ತಮ್ಮ ಗೆಳೆಯ, ಗಾಯಕ ನಿಕ್ ಜೊನಾಸ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿ ವಿದೇಶದಲ್ಲಿ, ಮುಂಬೈನಲ್ಲಿ ಆಗಾಗ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾರ ಬಾಲ್ಯದ ಗೆಳತಿ ಹಾಗೂ ಸೋದರ ಸಂಬಂಧಿಯೂ ಆಗಿರುವ ನಟಿ ಪರಿಣೀತಿ ಚೋಪ್ರಾ ಪಿಗ್ಗಿ– ನಿಕ್‌ನ ಪ್ರೇಮ ನಿವೇದನೆಯಿಂದ ಹಿಡಿದು ನಿಶ್ಚಿತಾರ್ಥದ ತನಕದ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 

ನಿಕ್‌ ಮೊದಲ ಬಾರಿ ಪ್ರೇಮ ನಿವೇದನೆ ಮಾಡಿದ್ದು ಪ್ರಿಯಾಂಕಾ ಹುಟ್ಟುಹಬ್ಬದಂದು. ಉಂಗುರ ತೊಡಿಸಿ ತಮ್ಮ ಪ್ರೇಮವನ್ನು ತೋಡಿಕೊಂಡಿದ್ದರಂತೆ. ಆ ದಿನ ಪ್ರಿಯಾಂಕಾ ಬೆಳಗ್ಗಿನ ಜಾವ ಮೂರು ಗಂಟೆಗೆ ಸಹೋದರಿ ಪರಿಣೀತಿಗೆ ಕರೆ ಮಾಡಿ ಈ ಖುಷಿ ಹಂಚಿಕೊಂಡಿದ್ದಾರಂತೆ.

‘ಬೆಳಗ್ಗಿನ ಜಾವ 3 ಗಂಟೆಗೆ ಪ್ರಿಯಾಂಕಾಳ ಮಿಸ್‌ಕಾಲ್‌ ಇತ್ತು. ನಾನು ‘ಫೇಸ್‌ಟೈಮ್‌’ ಮೂಲಕ ಆಕೆಗೆ ಕರೆ ಮಾಡಿದೆ. ಅವರು ನನಗೆ ನಿಕ್‌ ತೊಡಿಸಿದ ರಿಂಗ್‌ ತೋರಿಸಿದಳು. ಆಗ ಪ್ರಿಯಾಂಕಾ ಹಾಗೂ ಜೊನಾಸ್‌ ಇಬ್ಬರು ಜೊತೆಗಿದ್ದರು. ತಾವಿಬ್ಬರೂ ಪರಸ್ಪರ ಇಷ್ಟಪಡುತ್ತಿರುವುದಾಗಿ ಹೇಳಿಕೊಂಡರು. ಇದನ್ನು ಕೇಳಿ ನನಗೆ ಖುಷಿಯಲ್ಲಿ ಅಳುವೇ ಬಂದು ಬಿಟ್ಟಿತ್ತು. ಅದು ನನ್ನ ಜೀವನದ ಹೆಚ್ಚು ಭಾವನಾತ್ಮಕ ಹಾಗೂ ಖುಷಿಯ ಕ್ಷಣ’ ಎಂದು ಪರಿಣೀತಿ ಹೇಳಿಕೊಂಡಿದ್ದಾರೆ.

‘ಈ ವಿಚಾರ ಕುಟುಂಬದಲ್ಲಿ ಮೊದಲು ಗೊತ್ತಾಗಿದ್ದು ನನಗೇ’ ಎಂದು ಖುಷಿ ಹಂಚಿಕೊಂಡಿರುವ ಅವರು, ‘ಪ್ರಿಯಾಂಕಾ ಜೀವನದಲ್ಲಿ ಯಾರೋ ವಿಶೇಷ ವ್ಯಕ್ತಿ ಇದ್ದಾರೆ ಎಂಬುದು ನನಗೆ ಮೊದಲಿನಿಂದಲೂ ಗೊತ್ತಿತ್ತು. ಆದರೆ ನಿಕ್‌ ಎಂಬುದು ಗೊತ್ತಾಗಿರಲಿಲ್ಲ. ಪ್ರಿಯಾಂಕಾ ಒಂದು ದಿನ ನನಗೆ ಕರೆ ಮಾಡಿ, ನಿಕ್‌ ಜೊತೆ ಭಾರತಕ್ಕೆ ಬರುತ್ತಿದ್ದೇನೆ ಎಂದು ಹೇಳಿದರು. ಆಗ ನನಗೆ ಇವರಿಬ್ಬರ ನಡುವೆ ಗಂಭೀರವಾಗಿ ಏನೋ ನಡೆಯುತ್ತಿದೆ ಎಂಬುದು ಅರ್ಥವಾಯಿತು. ನಿಕ್‌ನನ್ನು ಭೇಟಿಯಾದೆ. ಆಗ ನಮ್ಮ ಜೊತೆ ಎಂಟರಿಂದ 10 ಜನರಿದ್ದರಷ್ಟೇ. ಅವರಲ್ಲಿ ಪ್ರಿಯಾಂಕಾ ಕುಟುಂಬದ ವ್ಯಕ್ತಿ ನಾನೊಬ್ಬಳೇ ಆಗಿದ್ದೆ’ ಎಂದು ಅವರು ತಿಳಿಸಿದ್ದಾರೆ. 

ಪ್ರಿಯಾಂಕಾ ಹಾಗೂ ಪರಿಣೀತಿ ಉತ್ತಮ ಸ್ನೇಹಿತರು ಎಂದೇ ಬಾಲಿವುಡ್‌ ನಲ್ಲಿ ಗುರುತಿಸಿಕೊಂಡಿದ್ದು, ನಿಕ್‌ ಪರಿಚಯವಾದಾಗಿ ನಿಂದಲೂ ತಮ್ಮಿಬ್ಬರ ನಡುವೆ ಏನೆಲ್ಲಾ ಆಗುತ್ತಿದೆ ಎಂಬುದನ್ನು ಪ್ರಿಯಾಂಕಾ, ಪರಿಣೀತಿಗೆ ಎಲ್ಲಾ ಹೇಳಿಕೊಳ್ಳುತ್ತಾರಂತೆ. ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಸಂದರ್ಭದಲ್ಲಿ ಪರಿಣಿತಿ,  ‘ನಿನಗೆ ನಿನ್ನ ಕನಸಿನ ರಾಜ ಸಿಕ್ಕಿದ್ದಾನೆ. ಸೋ ಯು ಆರ್ ಲಕ್ಕಿ’ ಎಂದು ಪ್ರಿಯಾಂಕಾಗೆ ಭಾವನಾತ್ಮಕ ಪತ್ರ ಬರೆದಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 4

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !