ಆಳಂದ ತಾಪಂ ಕಚೇರಿ ಎದುರು ಪ್ರತಿಭಟನೆ

7
ವಿವಿಧ ಬೇಡಿಕೆ ಈಡೇರಿಕೆಗೆ ಗ್ರಾಪಂ ನೌಕರರ ಆಗ್ರಹ

ಆಳಂದ ತಾಪಂ ಕಚೇರಿ ಎದುರು ಪ್ರತಿಭಟನೆ

Published:
Updated:
ಆಳಂದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು

ಆಳಂದ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಗ್ರಾಪಂ ನೌಕರರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಧುತ್ತರಗಾಂವ ಮಾತನಾಡಿ, ‘ಸರ್ಕಾರವು ನೌಕರರ ಕನಿಷ್ಟ ವೇತನ ಜಾರಿ ಮಾಡಿದೆ. ಆದರೆ ಇಎಫ್‌ಎಂಎಸ್ ಮುಖಾಂತರ ಎಲ್ಲ ನೌಕರರ ವೇತನ ಬಿಡುಗಡೆಯಾಗಬೇಕು, ಗ್ರಾಮ ಪಂಚಾಯಿತಿ ನೌಕರರಿಗೂ ವಿಮಾ ಸೌಲಭ್ಯ. ಆರೋಗ್ಯ ಸೇವೆ ಹಾಗೂ ಇತರ ಸರ್ಕಾರಿ ನೌಕರರಿಗೂ ದೊರೆಯುವ ಸೌಲಭ್ಯಗಳು ನೀಡಬೇಕು ’ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕರಣಿ ಮಾತನಾಡಿ, ‘ಗ್ರಾಮ ಪಂಚಾಯಿತಿ ನೌಕರರ ಹಿತ ಕಾಪಾಡಲು ಎಂ.ಎಸ್.ಸ್ವಾಮಿ ಅವರು ಸಲ್ಲಿಸಿದ ವರದಿಯ ಶಿಫಾರಸ್ಸುಗಳು ಜಾರಿಗೆ ತರಬೇಕು, ನೌಕರರ ಸೇವಾವಧಿ ಹಿನ್ನಲೆಯಲ್ಲಿ ಬಡ್ತಿ ಸೌಲಭ್ಯ ಒದುಗಿಸಲು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅನೀತಾ ಅವರು ಧರಣಿ ನಿರತ ನೌಕರರ ಮನವಿ ಸ್ವೀಕರಿಸಿ ಮನವಿ ಸರ್ಕಾರಕ್ಕೆ ಕಳುಹಿಸಲಾಗುವುದು. ತಾಲ್ಲೂಕು ಮಟ್ಟದ ನೌಕರರ ಸಮಸ್ಯೆಗೆ ಸೂಕ್ತ ಸ್ಪಂದಿಸುವ ಭರವಸೆ ನೀಡಿದರು.

ತಾಲ್ಲೂಕು ಅಧ್ಯಕ್ಷ ಶಿವರುದ್ರಯ್ಯ ಸ್ವಾಮಿ, ಕಾರ್ಯದರ್ಶಿ ಕಲ್ಯಾಣಪ್ಪ ಗಾಯಕವಾಡ, ನೌಕರರಾದ ವೀರಭದ್ರ ದಿವಟಗಿ, ಶಶಿಕಾಂತ ನಿಕ್ಕಂ, ಹಣಮಂತರಾಯ ಮದಗುಣಕಿ,ರಾಜೇಂದ್ರ ರುದ್ರವಾಡಿ, ಗುಂಡಪ್ಪ ಘಂಟೆ, ಮೌನೇಶ ಸುತಾರ, ಮಲ್ಲಿನಾಥ ಮಹಾಗಾಂವ, ಶಿವಾನಂದ ಜಿಡಗಾ, ಶಶಿಕಾಂತ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !