ವಿಜಯಪುರ: ಜಿಲ್ಲೆಯ ಐದು ಪುರಸಭೆಗಳ ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ಪ್ರಕಟ

7
ಮುದ್ದೇಬಿಹಾಳ ಪುರಸಭೆ ಕಾಂಗ್ರೆಸ್‌ ಮಡಿಲಿಗೆ

ವಿಜಯಪುರ: ಜಿಲ್ಲೆಯ ಐದು ಪುರಸಭೆಗಳ ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ಪ್ರಕಟ

Published:
Updated:

ವಿಜಯಪುರ: ಜಿಲ್ಲೆಯ ಐದು ಪುರಸಭೆಗಳ ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಿ, ರಾಜ್ಯ ಸರ್ಕಾರ ತನ್ನ ಸರ್ಕಾರಿ ಪತ್ರದಲ್ಲಿ ಸೋಮವಾರ ಆದೇಶ ಹೊರಡಿಸಿದೆ.

ಅತಂತ್ರ ಫಲಿತಾಂಶ ಹೊಂದಿರುವ ಮುದ್ದೇಬಿಹಾಳ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ನಿಗದಿ ಪಡಿಸಿದ್ದು, 10ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಏಕೈಕ ಸದಸ್ಯೆ ಸೋನುಬಾಯಿ ನಾಯ್ಕ್‌ ನಿರಾಯಾಸವಾಗಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಸಿಂದಗಿ ಪುರಸಭೆ ಅಧ್ಯಕ್ಷ–ಸಾಮಾನ್ಯ, ಉಪಾಧ್ಯಕ್ಷ–ಹಿಂದುಳಿದ ವರ್ಗ, ಇಂಡಿ ಅಧ್ಯಕ್ಷ–ಹಿಂದುಳಿದ ವರ್ಗ, ಉಪಾಧ್ಯಕ್ಷ–ಸಾಮಾನ್ಯ, ಬಸವನಬಾಗೇವಾಡಿ ಅಧ್ಯಕ್ಷ–ಹಿಂದುಳಿದ ವರ್ಗ, ಉಪಾಧ್ಯಕ್ಷ–ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದ್ದರೆ, ತಾಳಿಕೋಟೆ ಪುರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ಸ್ಥಾನಗಳೆರೆಡೂ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !