ಪುಷ್ಪಗಿರಿಯ ಮಲ್ಲಿಕಾರ್ಜುನ

ಶುಕ್ರವಾರ, ಏಪ್ರಿಲ್ 19, 2019
27 °C

ಪುಷ್ಪಗಿರಿಯ ಮಲ್ಲಿಕಾರ್ಜುನ

Published:
Updated:
Prajavani

ಕೊಡಗು ಜಿಲ್ಲೆಯ ಸೋಮವಾರಪೇಟೆಗೆ ಸುಮಾರು ಮೂವತ್ತಾರು ಕಿಲೋಮೀಟರ್ ದೂರವಿರುವ ಪುಷ್ಪಗಿರಿ ಪಶ್ಚಿಮಘಟ್ಟಕ್ಕೆ ಸೇರಿದ ಒಂದು ಗಿರಿಶಿಖರ. ಈ ಬೆಟ್ಟದ ಪಶ್ಚಿಮಕ್ಕೆ ಸುಬ್ರಹ್ಮಣ್ಯ ಕ್ಷೇತ್ರವಿದೆ. ಹಾಗಾಗಿ ಇದಕ್ಕೆ ಸುಬ್ರಹ್ಮಣ್ಯ ಬೆಟ್ಟ ಮತ್ತು ಕುಮಾರಪರ್ವತ ಎಂಬ ಹೆಸರುಗಳೂ ಇವೆ.

ಪುಷ್ಪಗಿರಿಯ ಬುಡದಲ್ಲಿರುವ ಕುಮಾರಳ್ಳಿ ಎಂಬಲ್ಲಿ  ಶಾಂತಮಲ್ಲಿಕಾರ್ಜುನ ದೇವಾಲಯವಿದೆ. ಮಲ್ಲಿಕಾರ್ಜುನನಲ್ಲದೆ ಇಲ್ಲಿ ಸುಬ್ರಹ್ಮಣ್ಯ, ಗಣಪತಿ ಮತ್ತು ದುರ್ಗಿಯ ಗುಡಿಗಳೂ ಇವೆ. ಅಲ್ಲದೆ ನಿಜವಾದ ಹುತ್ತವೊಂದಕ್ಕೆ ಕಟ್ಟೆ ಕಟ್ಟಿ ಪೂಜೆಗೆ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ.

ಕುಮಾರಳ್ಳಿಯಿಂದ ಬರುವ ಅರ್ಚಕರು ಬೆಳಿಗ್ಗೆ ಒಂಭತ್ತು ಘಂಟೆಯಿಂದ ಮಧ್ಯಾಹ್ನದವರೆಗೆ ವಿವಿಧ ಪೂಜಾಕಾರ್ಯಗಳನ್ನು ನಡೆಸುತ್ತಾರೆ. ಶಿವರಾತ್ರಿ, ನಾಗಪಂಚಮಿ, ಕೃಷ್ಣಾಷ್ಟಮಿ, ನವರಾತ್ರಿಗಳಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವುದು ಈ ದೇವಾಲಯದ ವಿಶೇಷ.

ಪುಷ್ಪಗಿರಿ ಬೆಟ್ಟವನ್ನೇರುವವರು ಕುಮಾರಳ್ಳಿಯ ಸಮೀಪದಿಂದಲೇ ಚಾರಣ ಪ್ರಾರಂಭ ಮಾಡುತ್ತಾರೆ. ತೀರಾ ಕಡಿದಾದ ಬೆಟ್ಟವಾದುದರಿಂದ ಎಚ್ಚರಿಕೆಯಿಂದ, ಗುಂಪಾಗಿ ಏರಬೇಕು. ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಅವಶ್ಯ. ಶಿವರಾತ್ರಿಯಂದು ನೂರಾರು ಜನ ಶಾಂತಮಲ್ಲಿಕಾರ್ಜುನನಿಗೆ ನಮಿಸಿ ಬೆಟ್ಟವೇರಲು ತೊಡಗುತ್ತಾರೆ. ಬೆಟ್ಟದ ಮೇಲಿರುವ ಪುಟ್ಟ ಗುಡಿಯಲ್ಲಿ ಪೂಜೆ ಸಲ್ಲಿಸುತ್ತಾರೆ.


ಸುಬ್ರಹ್ಮಣ್ಯ ದೇವರು

ಪುಷ್ಪಗಿರಿಯಲ್ಲಿ ಹುಟ್ಟುವ ಕುಮಾರಧಾರಾ ನದಿ ಸ್ವಲ್ಪ ದೂರ ಹರಿದು ಮಲ್ಲಳ್ಳಿ ಎಂಬಲ್ಲಿ ಸುಂದರ ಜಲಪಾತವನ್ನು ನಿರ್ಮಿಸಿ, ನಂತರ ಸುಬ್ರಹ್ಮಣ್ಯ ಕ್ಷೇತ್ರವನ್ನು ಹಾದು ನೇತ್ರಾವತಿ ನದಿಯನ್ನು ಸೇರುತ್ತದೆ. ದೇವಾಲಯದ ಪಕ್ಕದಲ್ಲಿರುವ ಬೃಹತ್ ಸಂಪಿಗೆ ಮರವು ಒಂಬೈನೂರು ವರ್ಷಗಳಿಗೂ ಹಿಂದಿನದು ಎಂದು ಹೇಳಲಾಗುತ್ತದೆ. ಸಂಪಿಗೆ ಮರವು ಇಷ್ಟೊಂದು ದೊಡ್ಡದಾಗಿ ಬೆಳೆಯುವುದು ತೀರಾ ಅಪರೂಪ. ಹಾಗಾಗಿ ಈ ಮರವೂ ನೋಡಬೇಕಾದದ್ದೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !