ವಿಶ್ವನಾಥ್‌ಗೆ ಏನಾಗಿದೆ ಗೊತ್ತಾಗ್ತಿಲ್ಲ; ದೇಶಪಾಂಡೆ

ಭಾನುವಾರ, ಜೂನ್ 16, 2019
30 °C

ವಿಶ್ವನಾಥ್‌ಗೆ ಏನಾಗಿದೆ ಗೊತ್ತಾಗ್ತಿಲ್ಲ; ದೇಶಪಾಂಡೆ

Published:
Updated:

ವಿಜಯಪುರ: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ಗೆ ಏನಾಗಿದೆ ಗೊತ್ತಾಗ್ತಿಲ್ಲ. ನಿತ್ಯವೂ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಏಕೆ ನೀಡುತ್ತಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

‘ತಮ್ಮ ಮನದಿಂಗಿತ, ಸ್ಪಷ್ಟ ಸಂದೇಶವನ್ನು ಜೆಡಿಎಸ್ ಹೈಕಮಾಂಡ್‌ಗೆ ತಿಳಿಸಲಿ. ತಮ್ಮ ಜವಾಬ್ದಾರಿ ಅರಿತು ಮಾತನಾಡಲಿ. ಗೊಂದಲ ಸೃಷ್ಟಿಗಾಗಿ ಹೇಳಿಕೆ ನೀಡುವುದು ಒಳ್ಳೆಯದಲ್ಲ’ ಎಂದು ಭಾನುವಾರ ವಿಜಯಪುರ ತಾಲ್ಲೂಕಿನ ನಾಗಠಾಣದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

‘ನಾನು ಇವರೆಲ್ಲರಿಗಿಂತಲೂ ಹಿರಿಯನಿದ್ದೇನೆ. ದಿನಕ್ಕೆ 10 ಹೇಳಿಕೆ ಕೊಡಬಹುದು. ಆದರೆ ನನ್ನ ಇತಿಮಿತಿಯಲ್ಲೇ ಮಾತನಾಡುವೆ. ಇದನ್ನು ಎಲ್ಲರೂ ಪಾಲಿಸಬೇಕು. ತಮ್ಮ ಜವಾಬ್ದಾರಿಗಳನ್ನು ಅರಿತು ಮಾತನಾಡಬೇಕು’ ಎಂದು ದೋಸ್ತಿ ಪಕ್ಷಗಳ ಮುಖಂಡರಿಗೆ ದೇಶಪಾಂಡೆ ಸಲಹೆ ನೀಡಿದರು.

‘ಸಮನ್ವಯ ಸಮಿತಿ ಬಗ್ಗೆ ಮಾತನಾಡಬಾರದು. ಈ ಸಮಿತಿ ರಚಿಸಿರುವುದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ,ದೇವೇಗೌಡ. ಈ ಸಮಿತಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ ಪ್ರಮುಖರೇ ಸದಸ್ಯರಿದ್ದಾರೆ’ ಎಂದು ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು.

‘ವಿಶ್ವನಾಥ್ ನನ್ನ ಒಳ್ಳೆಯ ಗೆಳೆಯ. ಕೆಲವೊಬ್ಬರಿಗೆ ಮಾಧ್ಯಮದ ಕ್ಯಾಮೆರಾಗಳ ಮುಂದೆ ನಿಲ್ಲುತ್ತಿದ್ದಂತೆ ಸ್ಫೂರ್ತಿ ಹೆಚ್ಚುತ್ತದೆ. ರಾಜ್ಯದಾದ್ಯಂತ ನನ್ನ ಹೇಳಿಕೆ ಹೆಚ್ಚು ಹೊತ್ತು ಪ್ರಸಾರವಾಗಲಿ ಎಂದು ಗೊಂದಲ ಸೃಷ್ಟಿಸುವ ಮಾತುಗಳನ್ನಾಡುತ್ತಾರೆ. ನೀವು ಸಹ ಇದಕ್ಕೆ ಒತ್ತು ಕೊಡ್ತೀರಿ’ ಎಂದು ಕಂದಾಯ ಸಚಿವರು ಮಾಧ್ಯಮದವರ ಕಾಲೆಳೆದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !