‘ಪರಿಸರ ದಿನ’ಕ್ಕೆ ನೀರೆರೆದ ವರುಣ

ಬುಧವಾರ, ಜೂನ್ 26, 2019
27 °C

‘ಪರಿಸರ ದಿನ’ಕ್ಕೆ ನೀರೆರೆದ ವರುಣ

Published:
Updated:
Prajavani

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ನೆಡಲಾಗಿದ್ದ ಸಸಿಗಳಿಗೆ ಬುಧವಾರ ಸಂಜೆ ಗುಡುಗು ಸಹಿತ ಸುರಿದ ಮಳೆ ನೀರೆರೆಯಿತು.

ಚಿಕ್ಕಜಾಲ, ಸರ್ಜಾಪುರ, ಯಲಹಂಕ, ಬಂಡಿಕೊಡಿಗೇಹಳ್ಳಿ, ಪಟ್ಟಾಭಿರಾಮನಗರ, ಪೀಣ್ಯ ಕೈಗಾರಿಕಾ ಪ್ರದೇಶ, ದೊಡ್ಡಬಿದರಕಲ್ಲು, ಬೆಳ್ಳಂದೂರು, ಮಹದೇವಪುರ, ಬೊಮ್ಮನಹಳ್ಳಿ, ಆನೇಕಲ್‌, ಜಿಗಣಿ, ಸುತ್ತಮುತ್ತ ಸುಮಾರು ಒಂದೂವರೆ ಗಂಟೆ ಮಳೆ ಆರ್ಭಟಿಸಿತು.

ನಗರದಲ್ಲಿ ಸರಾಸರಿ 13.45 ಮಿ.ಮೀ ಮಳೆಯಾಗಿದೆ. ಯಲಹಂಕ ಉಪನಗರ, ರಾಜರಾಜೇಶ್ವರಿನಗರದ ಐಡಿಯಲ್‌ ಹೋಂ ಬಡಾವಣೆ, ಮಲ್ಲತ್ತಹಳ್ಳಿ, ಬೆಳ್ಳಂದೂರು, ಟ್ರಿನಿಟಿ ರಸ್ತೆ, ವಿಲ್ಸನ್‌ ಗಾರ್ಡನ್‌, ಮಾತೃ ಬಡಾವಣೆಗಳಲ್ಲಿ ಮರಗಳು ನೆಲಕ್ಕುರುಳಿದವು. ಏಳು ಕಡೆಗಳಲ್ಲಿ ಮರದ ಕೊಂಬೆಗಳು ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ಜೋರು ಮಳೆಯಿಂದಾಗಿ ಶಾಂತಿನಗರ, ಅರೆಕೆರೆ, ಬಿಳೇಕಹಳ್ಳಿ, ಸಂಪಂಗಿರಾಮನಗರ, ಸುಧಾಮನಗರ, ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ರಸ್ತೆಯ ಮೇಲೆ ನೀರು ಹೊಳೆಯಂತೆ ಹರಿಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !