ಪುಷ್ಕಳ ಭೋಜನದ ‘ರಸದೌತಣ’

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಪುಷ್ಕಳ ಭೋಜನದ ‘ರಸದೌತಣ’

Published:
Updated:
Prajavani

ಚಿಕ್ಕ ಗೂಡಂಗಡಿಯಲ್ಲಿ ಪ್ರಾರಂಭವಾದ ವ್ಯಾಪಾರ ಇಂದು ಹೋಟೆಲ್‌ ಹಂತಕ್ಕೆ ತಲುಪಿದೆ.

ಇದು 17 ವರ್ಷದ ಹಿಂದಿನ ಕಥೆ.

ಎನ್‌.ಆರ್‌.ಕಾಲೊನಿಯ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರುವ ಐಸಿಐಸಿಐ ಬ್ಯಾಂಕ್‌ ಪಕ್ಕದ,  ಚಿಕ್ಕ ಗೂಡಂಗಡಿ ಬಳಿ, ಸಂಜೆಯಾದರೆ ಗಿಜಿಗಿಜಿ ಎನ್ನುವಷ್ಟು ಸದ್ದು. ಹತ್ತಾರು ಮಂದಿ ಕ್ಯೂ ನಿಂತು ಗಿರಮಿಟ್‌, ಬಜ್ಜಿ, ದಾವಣಗೆರೆ  ಬೆಣ್ಣೆ ದೋಸೆ ಸವಿಯುತ್ತಿದ್ದರು. 

‘ಗುರು ಕೊಟ್ಟೂರೇಶ್ವರ‘ ಗೂಡಂಗಡಿಯ ವ್ಯಾಪಾರ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು. ಈಗ ಅದೇ ಅಂಗಡಿ ಪಕ್ಕದಲ್ಲಿ ‘ರಸದೌತಣ’ ಹೋಟೆಲ್ ಆರಂಭಗೊಂಡಿದೆ. 

‘ನಾನು ಗೂಡಂಗಡಿಯಲ್ಲಿ ವ್ಯಾಪಾರ ಆರಂಭಿಸಿದಾಗ ಬೆಂಗಳೂರಿನ ಜನಕ್ಕೆ ದಾವಣಗೆರೆ ಬೆಣ್ಣೆ ದೋಸೆಯ ಪರಿಚಯವೇ ಇರಲಿಲ್ಲ. ನನಗೆ ಗೊತ್ತಿದ್ದ ಹಾಗೆ ಬೇರೆ ಎಲ್ಲೂ ಮಾಡುತ್ತಿರಲಿಲ್ಲ. 17 ವರ್ಷದ ಹಿಂದೆ ನಮಗೆ ವ್ಯಾಪಾರ ಸಾಕಷ್ಟು ಕುದುರಿತು. ಹೋಟೆಲ್‌ ಮಾಡುವ ಯೋಚನೆ ಇತ್ತು. ಆದರೆ ಜಾಗ, ದುಡ್ಡು ಎಲ್ಲಾ ಬೇಕಲ್ವಾ. ಕಾದಿದ್ದಕ್ಕೂ ಈಗ ಫಲ ಸಿಕ್ಕಿದೆ. ನಮ್ಮ ಗೂಡಂಗಡಿ ಪಕ್ಕದಲ್ಲಿಯೇ ಇದ್ದ ಅಂಗಡಿ ಇತ್ತೀಚೆಗೆ ಖಾಲಿ ಆಯಿತು. ಇಲ್ಲಿಯೇ ಹೋಟೆಲ್ ಆರಂಭಿಸಿದ್ದೇವೆ’ ಎಂದು ಮಾಲೀಕ ಎಚ್‌.ಮಹಾದೇವ ಅವರು ಹೇಳಿದರು. 

ಗುರುವಾರ ‘ರಸದೌತಣ‘ಕ್ಕೆ ಶಾಸಕ ರವಿ ಸುಬ್ರಹ್ಮಣ್ಯ ಚಾಲನೆ ನೀಡಿದರು. ನಟಿ ಮಯೂರಿ ಕೂಡ ಹೋಟೆಲ್‌ಗೆ ಬಂದು ಶುಭ ಹಾರೈಸಿದರು. 

ರಸದೌತಣದ ವಿಶೇಷ

ಗೂಡಂಗಡಿಗಿಂತ ರಸದೌತಣ ಭಿನ್ನವಾಗಿರಲಿದೆ. ಇಲ್ಲಿ ಉತ್ತರ ಭಾರತ ಶೈಲಿಯ ತಿನಿಸುಗಳು ಸಿಗಲಿವೆ. ದಕ್ಷಿಣ ಭಾರತ ಶೈಲಿಯ ಊಟ ಕೂಡ ಸಿಗಲಿದೆ. ಸಂಜೆಯಾದರೆ ಎಲ್ಲಾ ರೀತಿಯ ಚಾಟ್ಸ್‌ ಸಿಗಲಿದೆ. ಮಧ್ಯಾಹ್ನದ ಊಟಕ್ಕೆ ಬೇಳೆ ಹಾಗೂ ಕಾಯಿ ಹೋಳಿಗೆ ಕೂಡ ಸಿಗಲಿದೆ.

ಮೊದಲಿನಂತೆ ‘ಗುರು ಕೊಟ್ಟೂರೇಶ್ವರ’ ಗೂಡಂಗಡಿಯಲ್ಲಿ ಸಂಜೆಯ ಸಮಯ ಪಡ್ಡು ಸಿಗಲಿದೆ.

***

10 ವರ್ಷದಿಂದ ಇಲ್ಲಿಗೆ ತಿಂಡಿ ತಿನ್ನುವುದಕ್ಕೆ ಬರುತ್ತೇನೆ. ದಕ್ಷಿಣ ಭಾರತದ ತಿನಿಸುಗಳ ನಿಜವಾದ ರುಚಿ ಇಲ್ಲಿ ಮಾತ್ರ ಸಿಗುವುದಕ್ಕೆ ಸಾಧ್ಯ. ದೋಸೆ, ಗಿರಮಿಟ್ಟು, ಬಜ್ಜಿ ತಿಂದವರು ಮತ್ತೆ ಬರದೇ ಇರುವುದಿಲ್ಲ

ಸಿ.ಸಿ.ರಮೇಶ್‌,  ವಿಜಯನಗರ

 ***

ಹೋಟೆಲ್‌ ಸಮಯ: ಬೆಳಿಗ್ಗೆ 7.30ರಿಂದ ರಾತ್ರಿ 19.

ಟೇಬಲ್‌ ಕಾಯ್ದಿರಿಸಲು: 9448305384

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !