ರಾಜೀನಾಮೆ ನೀಡಲು ಸಿದ್ಧ: ಪುಟ್ಟರಂಗಶೆಟ್ಟಿ

7

ರಾಜೀನಾಮೆ ನೀಡಲು ಸಿದ್ಧ: ಪುಟ್ಟರಂಗಶೆಟ್ಟಿ

Published:
Updated:
Prajavani

ಚಾಮರಾಜನಗರ: ಹೈಕಮಾಂಡ್‌ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಬುಧವಾರ ಹೇಳಿದರು.

ಪ‍ಕ್ಷದ ಅತೃಪ್ತ ಶಾಸಕರಿಗೆ ಮಂತ್ರಿ ಪದವಿ ನೀಡುವುದಕ್ಕಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡಲು ಹಿರಿಯ ಸಚಿವರು ಮುಂದೆ ಬಂದಿದ್ದಾರಲ್ಲಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಲ್ಲಿ ತ್ಯಾಗದ ಪ್ರಶ್ನೆ ಬರುವುದಿಲ್ಲ. ನನಗೆ ಸಚಿವ ಸ್ಥಾನ ನೀಡಿದ್ದು ಹೈಕಮಾಂಡ್‌. ನಮ್ಮ ನಾಯಕರು ನಾಳೆಯೇ ರಾಜೀನಾಮೆ ನೀಡು ಎಂದು ಹೇಳಿದರೆ ಅದಕ್ಕೂ ಸಿದ್ಧನಿದ್ದೇನೆ’ ಎಂದು ಹೇಳಿದರು.

ನಾನು ನೋಡಿಲ್ಲ: ‘ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಾದ ಆನಂದ ಸಿಂಗ್‌ ಹಾಗೂ ಗಣೇಶ್‌ ನಡುವೆ ನಡೆದಿರುವ ಗಲಾಟೆಯನ್ನು ನಾನು ನೋಡಿಲ್ಲ. ನಾನು ಆಗ ಕೊಠಡಿಯಲ್ಲಿ ಮಲಗಿಕೊಂಡಿದ್ದೆ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !