ಬುಧವಾರ, ಏಪ್ರಿಲ್ 14, 2021
25 °C

ಸಂಶೋಧನಾ ಚಟುವಟಿಕೆಗೆ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಇದೇ ಮೊದಲ ಬಾರಿಗೆ ಆರಂಭಿಸಿದ ಪದವಿ ಹಂತದ ಸಂಶೋಧನಾ ಚಟುವಟಿಕೆಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಪ್ರಥಮ ವರ್ಷ 100ರಷ್ಟು ಸೀಟುಗಳು ಲಭ್ಯ ಇದ್ದು, 560ಕ್ಕೂ ಅಧಿಕ ಅರ್ಜಿಗಳು ವಿಶ್ವವಿದ್ಯಾಲಯಕ್ಕೆ ಬಂದಿವೆ. ಇದೇ ಕಾರಣಕ್ಕೆ ಸೀಟುಗಳ ಸಂಖ್ಯೆಯನ್ನು 100ರಿಂದ 200ಕ್ಕೆ ಹೆಚ್ಚಿಸಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕುಲಪತಿ ಡಾ.ಸಚ್ಚಿದಾನಂದ ಹೇಳಿದರು.

‘ಈ ಯೋಜನೆಯಡಿಯಲ್ಲಿ 3ರಿಂದ 6 ತಿಂಗಳ ಸಂಶೋಧನಾ ಚಟುವಟಿಕೆಗೆ ಪ್ರತಿಯೊಬ್ಬ ವಿದ್ಯಾರ್ಥಿ ₹ 15 ಸಾವಿರದಷ್ಟು ನಗದು ಪಡೆ
ಯಲು ಸಾಧ್ಯವಿದೆ. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ಸಲುವಾಗಿ ಈ ಯೋಜನೆ ಆರಂಭಿಸಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.