ಹೋಬಾರ್ಟ್: ಭಾರತ ತಂಡವು, ಮಹಿಳಾ ಏಕದಿನ ಸರಣಿಯ ಎರಡನೇ ಪಂದ್ಯ ಶುಕ್ರವಾರ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಬ್ಯಾಟರ್ಗಳಿಂದ ಸುಧಾರಿತ ಆಟದ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಕಾರಣ ಸರಣಿ ಗೆಲ್ಲಬೇಕಾದರೆ ಈ ಪಂದ್ಯ ವಿಶ್ವ ಚಾಂಪಿಯನ್ ಭಾರತದ ಪಾಲಿಗೆ ನಿರ್ಣಾಯಕ.

ಟಿ20 ಸರಣಿಯನ್ನು 2–1 ರಿಂದ ಗೆದ್ದುಕೊಂಡ ಉತ್ಸಾಹದಲ್ಲಿದ್ದ ಭಾರತ ತಂಡವು, ಬ್ರಿಸ್ಬೇನ್ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆರು ವಿಕೆಟ್ಗಳಿಂದ ಸೋತಿತ್ತು.

ಭಾರತ ತಂಡ, ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿಯನ್ನು ಗೆದ್ದೇ ಇಲ್ಲ. ಈ ಮಾದರಿಯಲ್ಲಿ ಭಾರತ ಎದುರಿನ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಮೆರೆದಿದ್ದು, ಎಲ್ಲ 11 ದ್ವಿಪಕ್ಷೀಯ ಸರಣಿಗಳನ್ನು ಗೆದ್ದುಕೊಂಡಿದೆ. 2025ರ ಸೆಪ್ಟೆಂಬರ್ನಲ್ಲಿ ಕೊನೆಯ ಬಾರಿ ನಡೆದ ಸರಣಿಯನ್ನು ಆಸ್ಟ್ರೇಲಿಯಾ 2–1 ರಿಂದ ಜಯಿಸಿತ್ತು.

ಮೊದಲ ಪಂದ್ಯದಲ್ಲಿ ಸ್ಮೃತಿ ಮಂದಾನ (58), ನಾಯಕಿ ಹರ್ಮನ್ಪ್ರೀತ್ ಕೌರ್ (53) ಮತ್ತು ಕಶ್ವೀ ಗೌತಮ್ (43) ಬಿಟ್ಟರೆ ಭಾರತದ ಇತರ ಬ್ಯಾಟರ್ಗಳು ಆಸ್ಟ್ರೇಲಿಯಾದ ಶಿಸ್ತುಬದ್ಧ ದಾಳಿಯೆದುರು ಬೇರೂರಿ ಆಡಲು ವಿಫಲರಾಗಿದ್ದರು. ಆರಂಭ ಆಟಗಾರ್ತಿಯರಾದ ಪ್ರತೀಕಾ ರಾವಲ್, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್ ಮತ್ತು ಆಲ್ರೌಂಡರ್ ದೀಪ್ತಿ ಶರ್ಮಾ ನಿರಾಶೆ ಮೂಡಿಸಿದ್ದರು. ಎರಡನೇ ಪಂದ್ಯದಲ್ಲಿ ಇವರಿಂದ ಭಾರತ ಉತ್ತಮ ಆಟ ನಿರೀಕ್ಷಿಸುತ್ತಿದೆ.

ಬೌಲಿಂಗ್ನಲ್ಲಿ ಶ್ರೀಚರಣಿ (41ಕ್ಕೆ2) ಅವರಿಗೆ ಇನಿಂಗ್ಸ್ನ ಮಧ್ಯಮ ಹಂತದಲ್ಲಿ ದೀಪ್ತಿ ಶರ್ಮಾ ಮತ್ತು ಕಶ್ವಿ ಅವರಿಂದ ಬೆಂಬಲ ದೊರೆಯಬೇಕಿದೆ. ರೇಣುಕಾ ಸಿಂಗ್, ಕ್ರಾಂತಿ ಗೌಡ್ ಅವರು ಈ ಹಿಂದಿನ ಪಂದ್ಯದಲ್ಲಿ ಆರಂಭದಲ್ಲಿ ಯಶಸ್ಸು ಪಡೆಯಲು ವಿಫಲರಾಗಿದ್ದರು. ಈ ಪಂದ್ಯದಲ್ಲಿ ಆಲ್ರೌಂಡರ್ಗಳಾದ ಅಮನ್ಜೋತ್ ಕೌರ್ ಅಥವಾ ಸ್ನೇಹ ರಾಣಾ ಇವರಲ್ಲಿ ಒಬ್ಬರು ಅವಕಾಶ ಪಡೆದರೂ ಅಚ್ಚರಿಯಿಲ್ಲ.

ಒಂದೆಡೆ ಭಾರತ ಒತ್ತಡದಲ್ಲಿದ್ದರೆ, ಇನ್ನೊಂದು ಕಡೆ ಆಸ್ಟ್ರೇಲಿಯಾ ಈ ಪಂದ್ಯವನ್ನೂ ಗೆದ್ದು ನಾಯಕಿ ಅಲಿಸಾ ಹೀಲಿ ಅವರಿಗೆ ಪರಿಪೂರ್ಣ ರೀತಿ ಬೀಳ್ಕೊಡುಗೆ ನೀಡುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಹೀಲಿ ಸೊಗಸಾದ 50 ರನ್ ಗಳಿಸಿದ್ದರು.

ಪಂದ್ಯ ಆರಂಭ: ಬೆಳಿಗ್ಗೆ 9.20 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.