ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ

ಶನಿವಾರ, ಮಾರ್ಚ್ 23, 2019
31 °C
ಯಲಹಂಕ– ಪೆನುಕೊಂಡ ಜೋಡಿಹಳಿ ಮಾರ್ಗ

ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ

Published:
Updated:
Prajavani

ಬೆಂಗಳೂರು: ಯಲಹಂಕ– ಪೆನುಕೊಂಡ ನಡುವೆ ನಿರ್ಮಿಸಲಾದ ಜೋಡಿಹಳಿಯನ್ನು ರೈಲ್ವೆ ಸುರಕ್ಷತಾ ಆಯುಕ್ತ ಕೆ.ಎ. ಮನೋಹರ್‌ ನೇತೃತ್ವದ ತಂಡ ಪರಿಶೀಲನೆ ನಡೆಸಿತು.

ಎರಡು ದಿನಗಳ ಕಾಲ ನಿರಂತರ ಪರಿಶೀಲನೆ ನಡೆಸಿದ ತಂಡವು ಹಳಿ ಜೋಡಣೆಗಳು, ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಬದಲಾವಣೆ
ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

‘ಬುಧವಾರ ಸಂಜೆ ವೇಳೆಗೆ ಪರಿಶೀಲನೆ ಮುಗಿಸಿದ್ದೇವೆ. ಐದಾರು ದಿನಗಳ ಒಳಗೆ ಪರಿಶೀಲನಾ ವರದಿ ಸಲ್ಲಿಸುತ್ತೇವೆ. ಬಳಿಕ ರೈಲು ಓಡಿಸುವ ಬಗ್ಗೆ ಇಲಾಖೆ ನಿರ್ಧಾರ ಕೈಗೊಳ್ಳಲಿದೆ’ ಎಂದು ಅವರು ತಿಳಿಸಿದರು. 

ರೈಲು ಸಂಚಾರ ರದ್ದು: ಹೊಸೂರು– ಬಾಣಸವಾಡಿ ನಡುವೆ ಸಂಚರಿಸುವ ಡೆಮು ರೈಲುಗಳ (ಸಂಖ್ಯೆ: 06572, 06573) ಸಂಚಾರವನ್ನು ಮಾರ್ಚ್‌ 14ರಂದು ರದ್ದುಗೊಳಿಸಲಾಗಿದೆ. ಮಾರ್ಗ ಅಡಚಣೆಯ ಕಾರಣಕ್ಕಾಗಿ ಸಂಚಾರ ರದ್ದುಗೊಳಿಸಬೇಕಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !