ಮನೆಗಳಿಗೆ ನುಗ್ಗಿದ ಹಿಮಕರಡಿ; ಆತಂಕದಲ್ಲಿ ಜನತೆ

7
ರಷ್ಯಾ: ನೊವಾಯ ಝೆಮ್ಲ್ಯಾದಲ್ಲಿ ನಡೆದ ಘಟನೆ

ಮನೆಗಳಿಗೆ ನುಗ್ಗಿದ ಹಿಮಕರಡಿ; ಆತಂಕದಲ್ಲಿ ಜನತೆ

Published:
Updated:
Prajavani

ಮಾಸ್ಕೊ: ಹತ್ತಕ್ಕೂ ಅಧಿಕ ಆಕ್ರಮಣಕಾರಿ ಹಿಮಕರಡಿಗಳು ಮನೆ ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಶನಿವಾರ ಏಕಾಏಕಿ ನುಗ್ಗಿದ್ದರಿಂದ ರಷ್ಯಾದ ಆರ್ಕ್‌ಟಿಕ್‌ ದ್ವೀಪಸಮೂಹದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

‘ರಷ್ಯಾದ ಈಶಾನ್ಯದಲ್ಲಿರುವ ನೊವಾಯ ಝೆಮ್ಲ್ಯಾ ದ್ವೀಪದಲ್ಲಿ ಸುಮಾರು 3 ಸಾವಿರ ಮಂದಿ ನೆಲೆಸಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಹಿಮಕರಡಿಗಳು ಜನವಸತಿ ಪ್ರದೇಶಕ್ಕೆ ನುಗ್ಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ಹಿಮಕರಡಿ ಕೊಲ್ಲಲು ರಷ್ಯಾದ ಅಧಿಕಾರಿಗಳು ಇದುವರೆಗೂ ಅನುಮತಿ ನೀಡಿಲ್ಲ. ಆದರೆ, ಪರಿಸ್ಥಿತಿ ಕುರಿತಂತೆ ಪರಾಮರ್ಶೆ ನಡೆಸಲು ಉನ್ನತ ಮಟ್ಟದ ತನಿಖೆ ನಡೆಸಲು ಸಮಿತಿಯೊಂದನ್ನು ಕಳುಹಿಸಲು ನಿರ್ಧರಿಸಿದೆ.

ಜಾಗತಿಕ ಹವಾಮಾನ ಪರಿಣಾಮ: ಜಾಗತಿಕ ತಾಪಮಾನದಿಂದ ಆರ್ಕ್‌ಟಿಕ್‌ ದ್ವೀ‍ಪ ಸಮೂಹವು ಅತ್ಯಂತ ವೇಗದಲ್ಲಿ ಕರಗುತ್ತಿದ್ದು, ಇದರಿಂದ ಆಹಾರ ಅರಸಿಕೊಂಡು ಭೂಮಿಯತ್ತ ವಲಸೆ ಬರುತ್ತಿವೆ.

ಹಿಮಕರಡಿಗಳು ಅಳಿವಿನಂಚಿನಲ್ಲಿರುವ ಜೀವಿಗಳು ಎಂದು ಪರಿಗಣಿಸಲಾಗಿದ್ದು, ಅವುಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ನೊವಾಯ ಝೆಮ್ಲ್ಯಾ ದ್ವೀಪದಲ್ಲಿ ರಷ್ಯಾ ವಾಯುನೆಲೆಯನ್ನು ಹೊಂದಿದೆ.

‘6ರಿಂದ 8 ಕರಡಿಗಳು ಮನೆಗಳು ನುಗ್ಗಿವೆ. ಇದರಿಂದ ಜನರು ಭೀತಿಗೆ ಒಳಗಾಗಿದ್ದು, ಅಲ್ಲಿಂದ ಹೊರ ನಡೆದಿದ್ದಾರೆ. ಮಕ್ಕಳು ಶಾಲೆಗಳಲ್ಲೇ ಉಳಿದಿದ್ದಾರೆ’ ಎಂದು ಸ್ಥಳೀಯ ಆಡಳಿತ ಮುಖ್ಯಸ್ಥ ಝಿಂಗ್ಸಾ ಮುಸಿನ್‌ ತಿಳಿಸಿದರು.

ಹಿಮಕರಡಿಗಳು ಸೇನಾ ಕಚೇರಿಗೆ ನುಗ್ಗಿದ್ದರಿಂದ ಬಳಕೆಯಾಗದ ಇಲ್ಲಿದ್ದ ಹಲವು ಕಟ್ಟಡಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !