ಪಾಕಿಸ್ತಾನದಲ್ಲಿ ₹1.42 ಲಕ್ಷ ಕೋಟಿ ಹೂಡಿಕೆಗೆ ಒಪ್ಪಿದ ಸೌದಿ ರಾಜ ಎಂಬಿಎಸ್‌

ಮಂಗಳವಾರ, ಮೇ 21, 2019
24 °C

ಪಾಕಿಸ್ತಾನದಲ್ಲಿ ₹1.42 ಲಕ್ಷ ಕೋಟಿ ಹೂಡಿಕೆಗೆ ಒಪ್ಪಿದ ಸೌದಿ ರಾಜ ಎಂಬಿಎಸ್‌

Published:
Updated:

ಇಸ್ಲಾಮಾಬಾದ್‌: ಹಣದ ಮುಗ್ಗಟ್ಟಿನಲ್ಲಿರುವ ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ₹1.42 ಲಕ್ಷ ಕೋಟಿ(20 ಬಿಲಿಯನ್‌ ಡಾಲರ್) ಮೌಲ್ಯದ ಹೂಡಿಕೆ ಮಾಡುವುದಾಗಿ ಸೌದಿ ಅರೇಬಿಯಾ ಭಾನುವಾರ ಒಪ್ಪಂದಕ್ಕೆ ಸಹಿಹಾಕಿದೆ. 

ಎರಡು ದಿನಗಳ ಪಾಕಿಸ್ತಾನ ಪ್ರವಾಸದಲ್ಲಿರುವ ಸೌದಿ ಅರೇಬಿಯಾದ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಪಾಕಿಸ್ತಾನದೊಂದಿಗೆ ಒಟ್ಟು ಏಳು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಈ ಒಪ್ಪಂದಗಳು ಚೇತರಿಕೆ ನೀಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಮ್ರಾನ್‌ ಖಾನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಎರಡು ಬಾರಿ ಸೌದಿ ಅರೇಬಿಯಾಗಿ ಭೇಟಿ ನೀಡಿ ಆರ್ಥಿಕ ಸಹಕಾರ ಕೋರಿದ್ದರು. 

ಎಂಬಿಎಸ್‌ ಎಂದೇ ಕರೆಸಿಕೊಳ್ಳುವ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾನುವಾರ ಇಸ್ಲಾಮಾಬಾದ್‌ಗೆ ಬಂದಿಳಿಯುವ ಮೂಲಕ ಏಷ್ಯಾ ರಾಷ್ಟ್ರಗಳ ಪ್ರವಾಸ ಆರಂಭಿಸಿದ್ದಾರೆ. 21 ಗನ್‌ ಸೆಲ್ಯೂಟ್‌ ಗೌರವದೊಂದಿಗೆ ಅವರನ್ನು ‍ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ಸೇನಾ ಮುಖ್ಯಸ್ಥ ಕಮರ್‌ ಜಾವೆದ್‌ ಬಾಜ್ವಾ ಬರಮಾಡಿಕೊಂಡರು. ಸೌದಿ ಕಾನ್ಸಲ್ ಕಚೇರಿಯಲ್ಲಿ ಜಮಾಲ್ ಖಶೋಗ್ಗಿ ಹತ್ಯೆಯಾದ ಐದು ತಿಂಗಳ ನಂತರ ಸಲ್ಮಾನ್‌ ಪ್ರವಾಸ ಕೈಗೊಂಡಿದ್ದಾರೆ.  

ಪಾಕಿಸ್ತಾನದ ಗಡಿ ದೇಶಗಳಾದ ಭಾರತ ಮತ್ತು ಸೌದಿ ಅರೇಬಿಯಾದ ಬದ್ಧವೈರಿ ಇರಾನ್‌ ನಡುವೆ ಆತಂಕದ ವಾತಾವರಣ ಇರುವ ವೇಳೆಯಲ್ಲೇ ಸೌದಿ ರಾಜ ಭೇಟಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್‌ ಉಗ್ರರು ನಡೆಸಿದ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿಯೂ ಇದೆ.

ಪಾಕಿಸ್ತಾನದ ಭೇಟಿ ನಂತರ ಸಲ್ಮಾನ್‌, ಭಾರತಕ್ಕೆ ಬರಲಿದ್ದಾರೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿ ಮಾಡಲಿದ್ದಾರೆ. ಗುರುವಾರ ಮತ್ತು ಶುಕ್ರವಾರ ಚೀನಾ ಭೇಟಿಯೊಂದಿಗೆ ಸಲ್ಮಾನ್‌ ಪ್ರವಾಸ ಮುಕ್ತಾಯವಾಗಲಿದೆ.

ಕಳೆದ ಡಿಸೆಂಬರ್‌ನಲ್ಲಿ ಅರ್ಜೆಂಟೀನಾದಲ್ಲಿ ನಡೆದ ಜಿ–20 ಶೃಂಗಸಭೆಯ ನಂತರ ಸಲ್ಮಾನ್‌ ಅವರು ಏಷ್ಯಾ ಪ್ರವಾಸ ಕೈಗೊಂಡಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 6

  Sad
 • 7

  Frustrated
 • 33

  Angry

Comments:

0 comments

Write the first review for this !