ಗಂಗಾನದಿ ಉಳಿವಿಗೆ ನನ್ನದೇ ನೇತೃತ್ವ: ಪೇಜಾವರ ಶ್ರೀ ಹೇಳಿಕೆ

7
‘ಪೂರ್ಣಪ್ರಮತಿ ಮಹೋತ್ಸವ’ದಲ್ಲಿ ಪೇಜಾವರ ಮಠದ ಸ್ವಾಮೀಜಿ ಹೇಳಿಕೆ

ಗಂಗಾನದಿ ಉಳಿವಿಗೆ ನನ್ನದೇ ನೇತೃತ್ವ: ಪೇಜಾವರ ಶ್ರೀ ಹೇಳಿಕೆ

Published:
Updated:
Prajavani

ಬೆಂಗಳೂರು: ‘ಗಂಗಾ ನದಿಯ ರಕ್ಷಣೆ ಹೋರಾಟಕ್ಕೆ ನಾನೇ ಧಾರ್ಮಿಕ ನೇತೃತ್ವ ವಹಿಸುತ್ತೇನೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ನಗರದ ಬಾಲಭವನದಲ್ಲಿ ‘ಪೂರ್ಣಪ್ರಮತಿ ಶಾಲೆ’ಯು ಬುಧವಾರ ಆಯೋಜಿಸಿದ್ದ ‘ಪೂರ್ಣಪ್ರಮತಿ ಮಹೋತ್ಸವ’ದಲ್ಲಿ ಅವರು ಮಾತನಾಡಿದರು.

‘ಗಂಗಾನದಿ ಉಳಿಸುವ ಸಲುವಾಗಿ ಈಗಾಗಲೇ ಮೂವರು ಸ್ವಾಮೀಜಿಗಳು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಇನ್ನೂ ಕೆಲವರು ಹೋರಾಟ ಮುಂದುವರಿಸಿದ್ದಾರೆ. ಗಂಗಾನದಿ ರಕ್ಷಣೆಗಾಗಿ ನಡೆಸುವ ಹೋರಾಟದ ನೇತೃತ್ವ ವಹಿಸುವಂತೆ ನನಗೆ ಸಾಕಷ್ಟು ಮಂದಿ ಹೇಳಿದ್ದರು. ಈಗ ಅವರ ಮನವಿಯನ್ನು ಸ್ವೀಕರಿಸಿದ್ದೇನೆ. ಅವರೂ ನನ್ನೊಂದಿಗೆ ಇರುವುದಾಗಿ ತಿಳಿಸಿದ್ದಾರೆ’ ಎಂದರು.

‘ಗಂಗಾ ನದಿ ನಿರಂತರವಾಗಿ ಹರಿಯುತ್ತಿರಬೇಕು. ಅದಕ್ಕೆ ಅಣೆಕಟ್ಟೆ ಕಟ್ಟುವುದು ಬೇಡ’ ಎಂದು ಆಗ್ರಹಿಸಿದರು. ರಾಜಕೀಯ ಮುಖಂಡರು ಬರೀ ಚುನಾವಣೆಗೆ ಕೆಲಸ ಮಾಡುತ್ತಾರೆ. ಇಂಥ ಧಾರ್ಮಿಕ ಕಾರ್ಯಗಳಿಗೆ ಚಕ್ಕರ್‌ ಹಾಕುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಗೌತಮ್, 'ನದಿಗೆ ಅಣೆಕಟ್ಟು ಕಟ್ಟಿದರೆ, ಪ್ರಾಣಿ–ಪಕ್ಷಿ ಸಂಕುಲದ ವಿನಾಶಕ್ಕೆ ಕಾರಣವಾಗುತ್ತದೆ’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ, 'ನದಿಗೆ ಅಣೆಕಟ್ಟು ನಿರ್ಮಿಸಿದರೆ ಕಾರ್ಖಾನೆಗಳು ತಲೆ ಎತ್ತಲಿವೆ. ಬಳಿಕ ಅವುಗಳ ಕೊಳಚೆ ಹರಿದು ನದಿ ಮಲಿನಗೊಳ್ಳುತ್ತದೆ. ಇದಕ್ಕೆ ಅವಕಾಶ ಬೇಡ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !