1,800 ಹೊಸ ನಕ್ಷತ್ರಗಳ ಶೋಧ

ಬುಧವಾರ, ಜೂನ್ 26, 2019
26 °C
ಬ್ರಹ್ಮಾಂಡದ ವಿಸ್ತರಣೆ ಅಧ್ಯಯನಕ್ಕೆ ‘ಸೂಪರ್‌ನೋವಾ’ ಶೋಧ ಸಹಕಾರಿ

1,800 ಹೊಸ ನಕ್ಷತ್ರಗಳ ಶೋಧ

Published:
Updated:
Prajavani

ಟೋಕಿಯೊ (ಪಿಟಿಐ): ವಿಜ್ಞಾನಿಗಳು 1,800ಕ್ಕೂ ಹೆಚ್ಚು ಹೊಸ ನಕ್ಷತ್ರಗಳನ್ನು ಅಥವಾ ಸೂಪರ್‌ನೋವಾಗಳನ್ನು ಪತ್ತೆ ಹಚ್ಚಿದ್ದಾರೆ. ಇದರಿಂದ ಬ್ರಹ್ಮಾಂಡವು ಯಾವ ರೀತಿ ಬದಲಾಗುತ್ತಿದೆ ಅಥವಾ ವಿಸ್ತರಿಸುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಜಪಾನ್‌ನಲ್ಲಿನ ಟೋಕಿಯೊ ವಿಶ್ವವಿದ್ಯಾಲಯ ಹಾಗೂ ಕಾವ್ಲಿ ಗಣಿತ ಮತ್ತು ಭೌತವಿಜ್ಞಾನ ಸಂಸ್ಥೆಯ ಸಂಶೋಧಕರು ಜಗತ್ತಿನ ಅತ್ಯುತ್ಕೃಷ್ಟ ಡಿಜಿಟಲ್‌ ಕ್ಯಾಮೆರಾಗಳು ಮತ್ತು ದೂರದರ್ಶಕಗಳ ಸಹಾಯದಿಂದ ತೆಗೆದ ಚಿತ್ರಗಳ ಆಧಾರದ ಮೇಲೆ ಈ ಕುರಿತು ವರದಿ ನೀಡಿದ್ದಾರೆ. 

800 ಜ್ಯೋತಿರ್‌ವರ್ಷಗಳ ದೂರದಲ್ಲಿರುವ 58 ಬಗೆಯ ಐಎ (ಎ ದರ್ಜೆಯ)  ಸೂಪರ್‌ನೋವಾಗಳು ಈ ಹೊಸ ನಕ್ಷತ್ರಗಳ ಪಟ್ಟಿಯಲ್ಲಿವೆ. ಹೆಚ್ಚು ಪ್ರಕಾಶಮಾನವಾದ ನಕ್ಷತ್ರಗಳನ್ನು ಐಎ ಸೂಪರ್‌ನೋವಾಗಳು ಎಂದು ಹೇಳಬಹುದು. ನಕ್ಷತ್ರಗಳು ಹೊಂದಿರುವ ಬೆಳಕು ಅಥವಾ ಪ್ರಕಾಶದ ಆಧಾರದ ಮೇಲೆ ಅದು ಭೂಮಿಯಿಂದ ಎಷ್ಟು ದೂರದಲ್ಲಿದೆ ಎಂದು ಗುರುತಿಸಲಾಗುತ್ತದೆ. 

ದೈತ್ಯ ನಕ್ಷತ್ರಗಳು ಅಂತ್ಯವಾಗುವುದು ಸೂಪರ್‌ನೋವಾ ಮೂಲಕ. ನಕ್ಷತ್ರವೊಂದು ಅಂತ್ಯವಾಗುವುದಕ್ಕೂ ಒಂದು ತಿಂಗಳಿಂದ ಆರು ತಿಂಗಳ ನಡುವಿನ ಅವಧಿಯಲ್ಲಿ ಸೂರ್ಯನಿಗಿಂತ 100 ಪಟ್ಟು ಹೆಚ್ಚು ಪ್ರಕಾಶಮಾನವಾಗುತ್ತದೆ. ನಂತರ, ಅದರ ಬೆಳಕು ಕಡಿಮೆಯಾಗುತ್ತಾ ಬಂದು ಅಂತ್ಯಗೊಳ್ಳುತ್ತದೆ. 

ಇಂತಹ ಅಸ್ವಾಭಾವಿಕ ಪ್ರಕಾಶವನ್ನು ಹೊಂದಿರುವ ನಕ್ಷತ್ರಗಳ ಅಧ್ಯಯನದಿಂದ, ವಿಶ್ವದ ಉಗಮದ ಸಂದರ್ಭದಲ್ಲಿ ಉಂಟಾದ ಮಹಾಸ್ಫೋಟ ಅಥವಾ ಬಿಗ್‌ಬ್ಯಾಂಗ್‌ ಸಂದರ್ಭದಲ್ಲಿನ ನಕ್ಷತ್ರಗಳ ಲಕ್ಷಣಗಳು ಹೇಗಿತ್ತು ಎಂಬುದನ್ನು ಊಹಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಸುಬರು ದೂರದರ್ಶಕವನ್ನು ಬಳಸಿ ಈ ನಕ್ಷತ್ರಗಳ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ, 870 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಡಿಜಿಟಲ್‌ ಕ್ಯಾಮೆರಾವು ರಾತ್ರಿ ವೇಳೆ ಸಂಪೂರ್ಣ ಆಕಾಶದ ಚಿತ್ರವನ್ನು ಒಂದೇ ಕ್ಲಿಕ್‌ನಲ್ಲಿ ಸೆರೆ ಹಿಡಿದಿದೆ’ ಎಂದು ಪ್ರೊಫೆಸರ್‌ ನವೋಕಿ ಯಸುಡಾ ಹೇಳುತ್ತಾರೆ. 

ಈ ಚಿತ್ರಗಳ ಮೂಲಕ ಸಂಗ್ರಹಿಸಲಾದ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಬ್ರಹ್ಮಾಂಡದ ವಿಸ್ತರಣೆಯನ್ನು ಹೆಚ್ಚು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಅವರು ಹೇಳುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !