13 ರಿಂದ ಶೃಂಗಸಭೆ: ಮೋದಿ–ಜಿನ್‌ಪಿಂಗ್‌ ಮಾತುಕತೆ ಸಾಧ್ಯತೆ

ಬುಧವಾರ, ಜೂನ್ 26, 2019
23 °C
ಶಾಂಘೈ ಸಹಕಾರ ಸಂಘದ ಶೃಂಗಸಭೆ 13 ರಿಂದ

13 ರಿಂದ ಶೃಂಗಸಭೆ: ಮೋದಿ–ಜಿನ್‌ಪಿಂಗ್‌ ಮಾತುಕತೆ ಸಾಧ್ಯತೆ

Published:
Updated:

ಬೀಜಿಂಗ್‌: ಅಮೆರಿಕದ ಜತೆಗಿನ ವ್ಯಾಪಾರ ಕುರಿತ ಭಿನ್ನಾಭಿಪ್ರಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಜಿನ್‌ಪಿಂಗ್‌ ಚರ್ಚಿಸಲಿದ್ದಾರೆ ಎಂದು ಚೀನಾ ಹೇಳಿದೆ. ಅಮೆರಿಕದ ‘ವ್ಯಾಪಾರ ರಕ್ಷಣಾ ನೀತಿಯನ್ನು’ ವಿರೋಧಿಸುವ ಬಗ್ಗೆಯೂ ಉಭಯ ನಾಯಕರು ಶೃಂಗಸಭೆಯಲ್ಲಿ ಒಮ್ಮತಕ್ಕೆ ಬರುವ ಸಾಧ್ಯತೆಗಳಿವೆ ಎಂದು ಚೀನಾ ತಿಳಿಸಿದೆ.

ಕಿರ್ಗಿಸ್ತಾನ್‌ ರಾಜಧಾನಿ ಬಿಷ್ಕೆಕ್‌ನಲ್ಲಿ ಜೂನ್‌ 13 ಮತ್ತು 14 ರಂದು ನಡೆಯುವ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯಲ್ಲಿ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ.

‘ಮೋದಿ ಅವರು ಪ್ರಧಾನಿಯಾಗಿ ಮರು ಆಯ್ಕೆಯಾದ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ. ಮೋದಿ ಹಾಗೂ ಜಿನ್‌ಪಿಂಗ್‌ ಅವರು ಒಳ್ಳೆಯ ಸ್ನೇಹಿತರಾಗಿದ್ದು, ಇಬ್ಬರೂ ನಾಯಕರು ಭಾಗವಹಿಸಿದ್ದ, ಕಳೆದ ವರ್ಷ ವುಹಾನ್‌ನಲ್ಲಿ ನಡೆದ ಶೃಂಗಸಭೆ ಯಶಸ್ವಿಯಾಗಿತ್ತು’ ಎಂದು ವಿದೇಶಾಂಗ ಖಾತೆ ಉಪ ಸಚಿವ ಝಾಂಗ್‌ ಹನೌಯಿ ಹೇಳಿದ್ದಾರೆ.

ಮೋದಿ ಅವರು ಪ್ರಧಾನಿಯಾಗಿ ಮರು ಆಯ್ಕೆಯಾದ ನಂತರ ಭಾಗವಹಿಸುತ್ತಿರುವ ಪ್ರಮುಖ ಅಂತರರಾಷ್ಟ್ರೀಯ ಸಭೆ ಇದಾಗಿದೆ.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !