ಸಿಂದಗಿ: ವಿಪ್ರ ಸಮಾಜದ ವತಿಯಿಂದ ಗುರುವಾರ ಇಲ್ಲಿಯ ಭೀಮಾಶಂಕರ ಮಠದಲ್ಲಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.

ಜಯಂತಿ ನಿಮಿತ್ತ ಸಂಗಮೇಶ್ವರ ದೇವಸ್ಥಾನದ ಆವರಣದಿಂದ ಶಂಕರಾಚಾರ್ಯರ ಭಾವಚಿತ್ರದ ಶೋಭಾಯಾತ್ರೆ ಆರಂಭಗೊಂಡು ವಿವೇಕಾನಂದ ವೃತ್ತ, ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ರಸ್ತೆ ಮಾರ್ಗವಾಗಿ ಭೀಮಾಶಂಕರ ಮಠ ತಲುಪಿತು.

ಅವಧೂತ ಜೋಶಿ, ವಿಜಯ ಕುಲಕರ್ಣಿ, ಶ್ರೀರಾಮ ಜೋಶಿ, ಜಗನ್ನಾಥ ಜೋಶಿ, ಗುರುರಾಜ ಕುಲಕರ್ಣಿ, ವಿಕ್ರಮ ಕುಲಕರ್ಣಿ, ಸೋಮಯಾಜಿ, ರಾಘು ಕುಲಕರ್ಣಿ, ಪೋದ್ದಾರ, ಅಶೋಕ ಕುಲಕರ್ಣಿ ಶೋಭಾಯಾತ್ರೆಯ ನೇತೃತ್ವ ವಹಿಸಿದ್ದರು.

ಶ್ರೀಮಠದಲ್ಲಿ ಡಾ.ಬಿ.ಆರ್.ನಾಡಗೌಡ ಅಧ್ಯಕ್ಷತೆಯಲ್ಲಿ ಶಂಕರಾಚಾರ್ಯರ ಜಯಂತಿ ನಡೆಯಿತು. ಪ್ರಾಧ್ಯಾಪಕ ಡಾ.ಜೆ.ಜಿ.ಜೋಶಿ ಮಾತನಾಡಿದರು. ಶೋಭಾಯಾತ್ರೆ ಮುನ್ನ ಶ್ರೀಮಠದಲ್ಲಿ ಉಚಿತ ಉಪನಯನ ಕಾರ್ಯಕ್ರಮ ನಡೆಯಿತು. ನಂತರ ಮಹಾಪ್ರಸಾದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.