ಶರಣ ಮಡಿವಾಳ ಮಾಚಿದೇವನಿಗೆ ಸ್ಮಾರಕ

7

ಶರಣ ಮಡಿವಾಳ ಮಾಚಿದೇವನಿಗೆ ಸ್ಮಾರಕ

Published:
Updated:
Deccan Herald

ವಿಜಯಪುರ ಜಿಲ್ಲೆಯ ಐತಿಹ್ಯದಲ್ಲಿ 12ನೇ ಶತಮಾನ ಮಹತ್ವದ ಸ್ಥಾನ ಪಡೆದಿದೆ. ಬಸವಾದಿ ಪ್ರಮಥರು ಜನಿಸಿ, ನೆಲೆಸಿದ ಪುಣ್ಯಭೂಮಿಯಿದು. ಇದೇ ಭೂಮಿಯಲ್ಲಿ ಶರಣ ಮಡಿವಾಳ ಮಾಚಿದೇವರು ಜನಿಸಿರುವುದು ವಿಶೇಷ.

ವಚನನಿಧಿ ರಕ್ಷಕ ಎಂದೇ ಹೆಸರಾದ ವೀರ ಶರಣ ಮಡಿವಾಳ ಮಾಚಿದೇವರ ಜನ್ಮಭೂಮಿ ದೇವರಹಿಪ್ಪರಗಿ. ಸ್ಥಳೀಯರ ಹಲ ದಶಕದ ಬೇಡಿಕೆಗೆ ಈ ಹಿಂದಿನ ಸರ್ಕಾರ ಮನ್ನಣೆ ನೀಡಿ, ಮಾಚಿದೇವರ ಸ್ಮಾರಕ ನಿರ್ಮಾಣಕ್ಕೆ ₹ 3.20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಕೆಲಸವೂ ಆರಂಭಗೊಂಡಿದ್ದು, ಪ್ರಗತಿಯಲ್ಲಿದೆ.

ತಮಿಳುನಾಡು, ಕಾರ್ಕಳದ ಕುಶಲ ಕರ್ಮಿಗಳು ಸ್ಮಾರಕ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಐಹೊಳೆಯ ಗುತ್ತಿಗೆದಾರರಾದ ಸಿದ್ಧಲಿಂಗಯ್ಯ ನಿಂಬಾಳಗುಂಡಿ ನೇತೃತ್ವದಲ್ಲಿ ವಿವಿಧ ಕಾಮಗಾರಿ ನಡೆದಿವೆ.

ಈಗಾಗಲೇ ದೇವಾಲಯದ ಗರ್ಭಗುಡಿಯ ಕಾರ್ಯ ಮುಗಿದಿದೆ. ಗೋಪುರ, ದ್ವಾರ ಬಾಗಿಲು, ರಾಜಗೋಪುರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ದೇವಾಲಯ ನಿರ್ಮಾಣದ ಪೂರ್ವ ಯೋಜನೆ ಪ್ರಕಾರ ದೇವಾಲಯದ ಮುಖ ಮಂಟಪದ ಕಾರ್ಯ ಅಡಕಗೊಂಡಿರಲಿಲ್ಲ.

ಆದರೆ ದೇವಾಲಯಕ್ಕೆ ಮುಖ ಮಂಟಪದ ಅವಶ್ಯಕತೆ ಇರುವುದರಿಂದ ಇದನ್ನು ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ₹ 40 ಲಕ್ಷ ಅನುದಾನದ ಅವಶ್ಯಕತೆಯಿದೆ. ಇದಕ್ಕೆ ಸಂಬಂಧಿಸಿದಂತೆ ಅಂದಾಜಿನ ದಾಖಲೆಗಳನ್ನು ಸಲ್ಲಿಸಿದ್ದು, ಸರ್ಕಾರ ಒಪ್ಪಿಗೆ ನೀಡಬೇಕಿದೆ ಎಂದು ನಿರ್ಮಾಣದ ಮೇಲುಸ್ತುವಾರಿ ಕಾರ್ಯ ನಿರ್ವಹಿಸುತ್ತಿರುವ ವಾಸುದೇವ ಮಾಹಿತಿ ನೀಡಿದರು.

‘ಮಾಚಿದೇವರ ದೇವಸ್ಥಾನ ನಿರ್ಮಾಣದ ಜತೆಗೆ ಸ್ಮಾರಕವೂ ನಿರ್ಮಾಣವಾಗುತ್ತಿರುವುದು ಅತ್ಯಂತ ಮಹತ್ವಪೂರ್ಣ ಕಾರ್ಯವಾಗಿದೆ. ದೇವಾಲಯ ನಿರ್ಮಾಣದ ಅರ್ಧ ಶ್ರೇಯಸ್ಸು ಈ ಹಿಂದಿನ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರಿಗೂ ಸಹ ಸಲ್ಲಬೇಕು. ದೇವಾಲಯ ಜತೆ ಸ್ಮಾರಕದ ಅವಶ್ಯಕತೆಯನ್ನು ಅರಿತು ಕಾಳಜಿಯಿಂದ ಆಗಲೇ ಚಾಲನೆ ನೀಡಿದರು.

ನಿರ್ಮಾಣಗೊಳ್ಳಲಿರುವ ಈ ಸ್ಮಾರಕದಲ್ಲಿ ಮಾಚಿದೇವನ ಎಲ್ಲ ವಚನಗಳನ್ನು ಶಿಲಾಫಲಕಗಳ ಮೇಲೆ ಬರೆದು ಅಳವಡಿಸುವ ಕಾರ್ಯವಾಗಬೇಕು. ಇದರ ಜತೆಗೆ ಮಾಚಿದೇವನಿಗೆ ಸಂಬಂಧಿಸಿದ ರಥೋತ್ಸವ ಇಲ್ಲಿಯೇ ಜರುಗುವಂತಾಗಬೇಕು. ನೂರಾರು ವರ್ಷದ ರಥವನ್ನು ಬಿಸಿಲು, ಮಳೆಗಳಿಂದ ರಕ್ಷಿಸಲು ಅನುಕೂಲವಾಗುವಂತೆ ತೇರು ಮನೆ ನಿರ್ಮಿಸಿ, ರಥಕ್ಕೆ ಕಾಯಕಲ್ಪ ಕಲ್ಪಿಸಬೇಕು’ ಎಂದು ಭಕ್ತರಾದ ಮಲ್ಲಪ್ಪ ಕುಂಬಾರ, ಶಂಕರೆಪ್ಪ ಹಡಪದ, ಕಾಸಪ್ಪ ಕುಂಬಾರ, ಶ್ರೀಶೈಲ ಅಗಸರ, ಭೀಮರಾಯ ಕುಂಬಾರ, ಮಲ್ಲು ಹಡಪದ, ಅಪ್ಪುಗೌಡ ದಿಂಡವಾರ ಆಗ್ರಹಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !