ಇಟಲಿ ನೈಟ್‌ಕ್ಲಬ್‌ನಲ್ಲಿ ಕಾಲ್ತುಳಿತ: ಕನಿಷ್ಠ 6 ಮಂದಿ ಸಾವು, 12 ಜನರಿಗೆ ಗಾಯ

7

ಇಟಲಿ ನೈಟ್‌ಕ್ಲಬ್‌ನಲ್ಲಿ ಕಾಲ್ತುಳಿತ: ಕನಿಷ್ಠ 6 ಮಂದಿ ಸಾವು, 12 ಜನರಿಗೆ ಗಾಯ

Published:
Updated:

ಅಂಕೋನಾ: ಇಟಲಿಯ ಕರಾವಳಿ ಭಾಗ ಅಂಕೊನಾದಲ್ಲಿರುವ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ಬೆಳಗಿನ ಜಾವ ಕಾಲ್ತುಳಿತ ಉಂಟಾಗಿ ಕನಿಷ್ಠ ಆರು ಮಂದಿ ಸಾವಿಗೀಡಾಗಿದ್ದು, ಹತ್ತಾರು ಜನ ಗಾಯಗೊಂಡಿರುವುದಾಗಿ ವರದಿಯಾಗಿದೆ. 

ಕೊರಿನಾಲ್ಡೊದ ಬ್ಲೂ ಲಾಂಟರ್ನ್‌ ಕ್ಲಬ್‌ನ ಆಯೋಜಿಸಲಾಗಿದ್ದ ರ‍್ಯಾಪ್‌ ಹಾಡುಗಾರ ಫೆರಾ ಎಬಾಸ್ಟಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಕ್ಲಬ್‌ನ ಒಳಗೆ ದುರ್ವಾಸನೆ ಹರಡುತ್ತಿದ್ದಂತೆ ಗೊಂಗಲ ಸೃಷ್ಟಿಯಾಗಿದ್ದು, ಕಾಲ್ತುಳಿದ ಉಂಟಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ದುರ್ವಾಸನೆ ಬೀರುವ ವಸ್ತುವನ್ನು ಸಿಂಪಡಿಸಿರುವುದರಿಂದ, ಕ್ಲಬ್‌ನ ಒಳಗೆ ಇರಲಾಗದೆ ಜನರು ಹೊರ ಹೋಗಲು ಪ್ರಯತ್ನಿಸುತ್ತಿದ್ದಂತೆ ಕಾಲ್ತುಳಿತ ಉಂಟಾಗಿದೆ. ಬಹುತೇಕ ಯುವಕ–ಯುವತಿಯರೇ ನೆರೆದಿದ್ದ ಕಾರ್ಯಕ್ರಮವು ಆರು ಮಂದಿಯ ಸಾವಿನೊಂದಿಗೆ ಅಂತ್ಯವಾಗಿದೆ. ಒಬ್ಬರ ಮೇಲೆ ಒಬ್ಬರು ಬಿದ್ದು ಹತ್ತಾರು ಮಂದಿ ಗಾಯಗೊಂಡಿರುವುದಾಗಿ ಅಗ್ನಿ ಶಾಮಕ ಸೇವೆಗಳ ಇಲಾಖೆ ಪ್ರಕಟಿಸಿದೆ. 

ಬೆಳಗಿನ ಜಾವ ಸುಮಾರು 1 ಗಂಟೆಗೆ ಈ ಅವಗಢ ಸಂಭವಿಸಿದೆ.

’ಸಂಗೀತ ಕಾರ್ಯಕ್ರಮ ಶುರುವಾಗುವುದನ್ನು ಎದುರು ನೋಡುತ್ತ ನಾವೆಲ್ಲ ಕುಣಿಯುತ್ತ ಸಂಭ್ರಮಿಸುತ್ತಿದ್ದೆವು. ಇದೇ ಸಮಯದಲ್ಲಿ ದುರ್ವಾಸನೆ ಮೂಗಿಗೆ ಬಡಿಯಿತು. ನಾವು ತುರ್ತು ನಿರ್ಗಮನದ ಕಡೆಗೆ ಓಡಿದೆವು. ಆದರೆ, ಅದು ಮುಚ್ಚಲಾಗಿತ್ತು. ಬೌನ್ಸರ್‌ಗಳು ಒಳಗೆ ಮರಳುವಂತೆ  ಹೇಳಿದರು’ ಎಂದು ಗಾಯಗೊಂಡಿರುವ 16 ವರ್ಷದ ಬಾಲಕ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !