ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಿಂಗ್ ವಿವಾದ: ಸಂಸ್ಕೃತಿಯ ನಾಶ ಖಂಡಿತ

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಡಬಿಂಗ್‌ನಿಂದ ಸಾಂಸ್ಕೃತಿಕ ಲೋಕ ಹಾಳಾಗುತ್ತದೆ. ಉದ್ಯಮಕ್ಕೆ ಆರ್ಥಿಕ ಹಾನಿಯೂ ಆಗುತ್ತದೆ. ಸಿನಿಮಾ ಲೇಖಕರಿಗೆ ಇದರಿಂದ ದೊಡ್ಡ ಪೆಟ್ಟು ಬೀಳುತ್ತದೆ. ಕ್ರಿಯಾಶೀಲತೆ ಸಾಯುತ್ತದೆ. ಚರಿತ್ರೆಯ ಆಧಾರ ತಪ್ಪುತ್ತದೆ.

ಕನ್ನಡದ ಎಷ್ಟೋ ಸಾಹಿತ್ಯ ಕೃತಿಗಳು ಸಿನಿಮಾ ಆಗಿವೆ. ಡಬ್ಬಿಂಗ್‌ನಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಕನ್ನಡ ಸಂಸ್ಕೃತಿಯೊಂದಿಗೆ ಇಂದು ನುಸುಳಿಕೊಂಡು ಹಲವು ಸಂಸ್ಕೃತಿಗಳು ಬಂದು ಸೇರಿ ಹೋಗಿವೆ. ಅದಕ್ಕೆ ಡಬಿಂಗ್ ಕೂಡ ಸೇರಿಕೊಂಡರೆ ನಮ್ಮ ಸಂಸ್ಕೃತಿಯ ನಾಶ ಖಂಡಿತ. ಇದರಿಂದ  ಸಿನಿಮಾ ತಂತ್ರಜ್ಞರು, ಕಾರ್ಮಿಕರು, ಕಲಾವಿದರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ. ಇದರ ಹೊಣೆ ಹೊರುವವರು ಯಾರು?

ಡಬಿಂಗ್‌ನಿಂದಾಗಿ ಕನ್ನಡ ಭಾಷೆ, ಸಂಸ್ಕೃತಿಯ ಅಧ್ಯಯನ ನಿಲ್ಲುವುದರಿಂದ ಅದು ಸ್ವಂತಿಕೆಯನ್ನು ಕಳೆದುಕೊಳ್ಳುತ್ತದೆ. ಬೇರೆ ಭಾಷೆಯಿಂದ ಸಿನಿಮಾಗಳನ್ನು ಡಬಿಂಗ್ ಮಾಡುವುದು  ಸೋಮಾರಿಗಳ ಕೆಲಸ. ಇದಕ್ಕೆ ಶ್ರಮ ಬೇಕಾಗಿಲ್ಲ, ಬುದ್ದಿಯೂ ಬೇಕಾಗಿಲ್ಲ. ಇದೊಂದು ಯಾಂತ್ರಿಕವಾದ ಕೆಲಸ. ಇಂದು ವರ್ಷಕ್ಕೆ 175 ಸಿನಿಮಾಗಳು ನಿರ್ಮಾಣವಾಗುತ್ತಿದೆ.

ಡಬಿಂಗ್ ಸಂಸ್ಕೃತಿಯಿಂದ ಮೂಲ ಕನ್ನಡ ಸಿನಿಮಾಗಳು ತೆರೆಕಾಣಲು ಅವಕಾಶವೇ ಇಲ್ಲದಂತಾಗಬಹುದು.. ಕನ್ನಡ ಸಿನಿಮಾಗಳಲ್ಲಿ ನಮ್ಮ ಕಲಾವಿದರನ್ನೇ ಕಾಣದ ಜನ ಕ್ರಮೇಣವಾಗಿ ನಮ್ಮನ್ನು ಮರೆತೇ ಬಿಡಬಹುದು. ನಾವು ಬೆಳೆದಿದ್ದೇ ಕನ್ನಡ ಸಿನಿಮಾಗಳಲ್ಲಿ ನಟಿಸಿ.

ಡಬಿಂಗ್ ಬಂದ ನಂತರ ನಮ್ಮಂಥವರನ್ನು ಜನ ನೆನಪಿಟ್ಟುಕೊಳ್ಳುವುದಿಲ್ಲ. ಯಾರೋ ನಟಿಸಿರುತ್ತಾರೆ. ಕನ್ನಡದಲ್ಲಿ ಮಾತುಗಳಿರುವುದರಿಂದ ಜನ ಅವರನ್ನು ನೋಡುತ್ತಿರುತ್ತಾರೆ. ಅಲ್ಲಿ ಕನ್ನಡದ ಕಲಾವಿದರಿಗೆ ಅವಕಾಶಗಳೇ ಇರುವುದಿಲ್ಲ. ಡಬಿಂಗ್‌ನಿಂದ ಒಂದಲ್ಲಾ ಒಂದು ದಿನ ಆ ಸಂದರ್ಭ ಬಂದೇ ಬರುತ್ತದೆ.

ಡಬಿಂಗ್ ಬೇಕು ಎನ್ನುವವರು ಸೋಮಾರಿಗಳು. ಒಂದು ರಾತ್ರಿಯಲ್ಲಿ ಶ್ರೀಮಂತರಾಗುವ ಹಂಬಲವುಳ್ಳವರು. ಹಣ ಮಾಡುವ ದುರಾಸೆಗೆ ಬಿದ್ದು ಎಲ್ಲಿಂದಲೋ ವಸ್ತು ತಂದು ಮಾರಾಟ ಮಾಡುವವರು. ನಾಡು, ಭಾಷೆ, ಸಂಸ್ಕೃತಿ ಬಗ್ಗೆ ಪ್ರೀತಿ ಇರುವವರು ಎಂದೂ ಡಬಿಂಗ್‌ಗೆ ಇಳಿಯಲಾರರು. ತಕ್ಷಣದ ಲಾಭದ ಬಗ್ಗೆ ಆಸೆಪಡದೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸಬೇಕು.

ಡಬಿಂಗ್ ದೂರ ಇರಿಸಿ ಸಂಸ್ಕೃತಿ ಕಟ್ಟುವ ಕೆಲಸ ಮಾಡಬೇಕು. ನಮ್ಮಲ್ಲೇ ಇರುವ ಕತೆಗಳನ್ನು ಸಿನಿಮಾ ಮಾಡಬಹುದು.  ಬೇರೆ ಭಾಷೆಯ ದೊಡ್ಡ ಒಳ್ಳೆಯ ಸಿನಿಮಾಗಳನ್ನು ಅದೇ ಭಾಷೆಯಲ್ಲಿ ನೋಡಿ ಆನಂದಿಸೋಣ. ಅಸ್ಸಾಮಿ ಭಾಷೆಯ ಸಿನಿಮಾ ನೋಡಿದಾಗ ಅದರ ಭಾವ ನಮಗೆ ಅರ್ಥವಾಗುತ್ತದೆ.

ಹಾಗೆಯೇ ನಮ್ಮ ಸಿನಿಮಾವನ್ನು ಅವರು ನೋಡಿದಾಗ ಅವರಿಗೂ ಅರ್ಥವಾಗುತ್ತದೆ. ಸಿನಿಮಾಗಳು ಸಂಸ್ಕೃತಿಯ ಕನ್ನಡಿ. ಆ ನಾಡಿನ ಜನರ ನೋವುಗಳ ಮೇಲೆ ಅದು ಬೆಳಕು ಚೆಲ್ಲುತ್ತದೆ. ಆಯಾ ಭಾಷೆಯ ಸಂಸ್ಕೃತಿಯನ್ನು ಆಯಾ ಭಾಷೆಯಲ್ಲೇ ನೋಡಬೇಕು.

ಡಾ. ರಾಜ್‌ಕುಮಾರ್ ಅವರಂಥ ಹಿರಿಯ ಕಲಾವಿದರು ಡಬಿಂಗ್ ವಿರುದ್ಧ ಹೋರಾಟ ನಡೆಸಿದರು. ಆ ಹೋರಾಟದ ಹಿಂದಿನ ಶ್ರಮ ಮತ್ತು ಚಿಂತನೆಯನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ಡಬಿಂಗ್ ನಮಗೆ ಬೇಕಾಗಿಲ...
ಡಬಿಂಗ್ ನಮಗೆ ಬೇಕಾಗಿಲ್ಲ. ಅದರಿಂದ ನಮ್ಮ ಸಂಸ್ಕೃತಿ ಉಳಿಯಲ್ಲ. ಕನ್ನಡ ಸಿನಿಮಾಗಳೇ ಬರುವುದಿಲ್ಲ. ಕನ್ನಡದ
ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ಇರುವುದಿಲ್ಲ ಎನ್ನುವುದಕ್ಕಿಂತ ಕನ್ನಡ ಸಂಸ್ಕೃತಿ ಮತ್ತು ಕತೆಯನ್ನು ಬಿಂಬಿಸುವ ಸಿನಿಮಾಗಳು ಬರುವುದಿಲ್ಲ ಎನ್ನುವುದು ಮುಖ್ಯ.

ಯಾಕೆಂದರೆ ಕಲಾವಿದರು ಎಲ್ಲಾ ಭಾಷೆಯಲ್ಲೂ ಸಲ್ಲುತ್ತಾರೆ. ಡಬಿಂಗ್ ಮಾಡುವುದರಿಂದ ಭಾಷೆ ಉಳಿಯುತ್ತೆ. ಅದೊಂದು ಉಳಿದರೆ ಸಾಕೇ?

ಕ್ರಿಯಾಶೀಲತೆ ನಾಶ
ವ್ಯಾಪಾರದ ದೃಷ್ಟಿಯಿಂದ ಡಬಿಂಗ್ ಬೇಕು ಎನ್ನುವವರು ಇದ್ದಾರೆ. ಆದರೆ ಕನ್ನಡ ಚಿತ್ರೋದ್ಯಮ ಇದನ್ನು ವಿರೋಧಿಸುತ್ತಿದೆ. ಡಬಿಂಗ್ ಮಾಡುವುದರಿಂದ ನಮ್ಮ ಕ್ರಿಯಾಶೀಲತೆ ಇಲ್ಲವಾಗುತ್ತದೆ ಎನ್ನಲಾಗುತ್ತಿದೆ. ಚಿತ್ರರಂಗದವನಾಗಿ ನನಗೂ ಕೂಡ ಡಬಿಂಗ್ ಬಗ್ಗೆ ಬೇಸರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT