‘ನನ್ನೊಳಗಿನ ಅಂತಃ ಸತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದು ಸನ್ನಿ ಬರೆದುಕೊಂಡಿದ್ದಾರೆ. 36ರ ಹರೆಯದ ಸನ್ನಿ ಈಗಾಗಲೇ ಸಹಿ ಹಾಕಿರುವ ಚಿತ್ರಗಳ ಸರಣಿಯಲ್ಲಿ ‘ತೇರಾ ಇಂತ್ಜಾರ್’ ಬೆನ್ನಲ್ಲಿ ಬಿಡುಗಡೆಯಾಗ ಬೇಕಿರುವುದು ‘ಟೀನಾ ಅಂಡ್ ಲೊಲೊ’ ಚಿತ್ರ. 2013ರಿಂದಲೂ ಚಿತ್ರೀಕರಣ ನಡೆದಿರುವ ಈ ಚಿತ್ರದಲ್ಲಿ ಸನ್ನಿ ಮತ್ತು ಕರಿಷ್ಮಾ ತನ್ನಾ, ಟೀನಾ ಮತ್ತು ಲೊಲೊ ಎಂಬ ಪಾತ್ರಗಳನ್ನು ನಿರ್ವಹಿಸಿದ್ದಾರೆ.