ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೂ ಬೇಕು ಬಿಳಿ ಎಕ್ಕ

Last Updated 31 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬಿಳಿ ಎಕ್ಕವನ್ನು ದೈವಿಕ ಕಾರ್ಯಗಳಲ್ಲಿ ಬಳಸುವ ಪದ್ಧತಿ ಇದೆ. ಗಣಪತಿಗೆ ಬಿಳಿ ಎಕ್ಕ ತುಂಬಾ ಪ್ರೀತಿ ಎನ್ನುವ ಪ್ರತೀತಿ. ಅದರೆ ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಪ್ರಾಮುಖ್ಯ ಹೊಂದಿದೆ.

* ಎಕ್ಕದ ಎಲೆಯನ್ನು ದೇಹದ ಸರ್ವಾಂಗಗಳಿಗೆ ಸ್ಪರ್ಶಿಸಿ, ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆ ಆಗುವುದು. ಈ ಕಾರಣಕ್ಕಾಗಿಯೇ ರಥಸಪ್ತಮಿ ದಿನ ಎಕ್ಕದ ಎಲೆಯ ಸ್ನಾನ ಮಾಡುವುದು.

* ಎಕ್ಕದ ಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುವುದು.

* ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು ಬಿಳಿ ಎಕ್ಕದ ಹೂವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ 15 ದಿನಗಳವರೆಗೆ ಸೇವಿಸಿದರೆ ಪರಿಹಾರ ಕಾಣಬಹುದು.

* ಮಾಸಿಕ ಋತುಸ್ರಾವದಲ್ಲಿ ಏರುಪೇರಾಗುತ್ತಿದ್ದರೆ ಅಥವಾ ಅನಿಯಮಿತವಾಗಿದ್ದಲ್ಲಿ ಎಕ್ಕದ ಹೂವು, ಬೆಲ್ಲ ಸೇರಿಸಿ, ಅರೆದು ಗುಳಿಗೆ ಮಾಡಿಕೊಂಡು, ದಿನಕ್ಕೆ 3–4 ಮಾತ್ರೆಯಂತೆ ಸೇವಿಸುವುದು ಉತ್ತಮ.

* ಬಿಳಿ ಎಕ್ಕದ ಎಲೆಯ ಕಷಾಯ ಸೇವಿಸಿದರೆ ಹೊಟ್ಟೆ ನೋವು ಶಮನವಾಗುವುದು.

* ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ ರಸದಲ್ಲಿ ಅರೆದು ಸೇವಿಸಿದರೆ ಉಪಶಮವಾಗುತ್ತದೆ.

* ಅಜೀರ್ಣವಿದ್ದರೆ, ಎಕ್ಕದ 10 ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.

* ಚರ್ಮದ ಕಾಯಿಲೆ ಇದ್ದರೆ ಬಿಳಿ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು.

* ಕ್ರಿಮಿಕೀಟಗಳು, ಕಜ್ಜಿ, ಊತ, ಉರಿ ಬಾಧಿಸುತ್ತಿದ್ದರೆ,  ಇದರ ಹಾಲನ್ನು ಅದರ ಮೇಲೆ ಲೇಪಿಸಿದರೆ, ಉಪಶಮನವಾಗುತ್ತದೆ.

* ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿಣದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು.

* ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ. ಆ ಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ.

* ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಖ ಕೊಟ್ಟರೆ  ಕೆಲವೇ ದಿನದಲ್ಲಿ ನೋವು ಶಮನವಾಗುತ್ತದೆ.

* ಎಕ್ಕದ ಬೇರಿನೊಂದಿಗೆ ನಿಂಬೆರಸ ಮಿಶ್ರಣ ಮಾಡಿ ಅರೆದು ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.

* ಪುಡಿ ಮಾಡಿದ ಒಣಗಿದ ಎಕ್ಕದ ತೊಗಟೆಯನ್ನು  ಜೇನುತುಪ್ಪದೊಂದಿಗೆ ತಿಂದರೆ ಕೆಮ್ಮು, ನೆಗಡಿ, ಕಫ ಕಡಿಮೆಯಾಗುತ್ತದೆ.

* ಚೇಳು ಕಡಿತಕ್ಕೂ ಎಕ್ಕದ ಬೇರನ್ನು ಔಷಧಿಯಾಗಿ ಬಳಸುತ್ತಾರೆ.

* ಮುಖದಲ್ಲಿ ಬಂಗು ಬಂದಿದ್ದರೆ ಇದರ ರಸ ಲೇಪಿಸಬೇಕು.  ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.

* ಹಲ್ಲು ನೋವಿಗೂ ಬಿಳಿ ಎಕ್ಕದ ರಸ ಒಳ್ಳೆಯ ಔಷಧ.

* ಕಫದಿಂದ ಕೂಡಿದ ಕೆಮ್ಮಿದ್ದರೆ, ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು 5 ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.

* ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಹುದು.

* ಮೂತ್ರಕಟ್ಟಿದ್ದಲ್ಲಿ ಎಕ್ಕದ ಎಲೆಗಳನ್ನು ಒಣಗಿಸಿ ನಯವಾದ ಪುಡಿಮಾಡಿಟ್ಟುಕೊಂಡು 10 ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿಸುವುದರಿಂದ ಮೂತ್ರವಿಸರ್ಜನೆ ಸುಗಮವಾಗುತ್ತದೆ.

* ಮೇಲಿಂದ ಮೇಲೆ ಅಜೀರ್ಣದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿ ಬೆಳಿಗ್ಗೆ ಮತ್ತು ರಾತ್ರಿ ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT