ನಮ್ಮಲ್ಲಿ ಹಿಂದೆ ಸತಿ ಪದ್ಧತಿ ಇತ್ತು. ಈ ಪದ್ಧತಿಯಲ್ಲಿ ಗಂಡ ಸತ್ತರೆ ಹೆಂಡತಿ ಗಂಡನ ಚಿತೆಗೆ ಹಾರಿ ಪ್ರಾಣಬಿಡಬೇಕಿತ್ತು. ಇದೇ ರೀತಿಯ, ಆದರೆ ಸ್ವಲ್ಪ ಭಿನ್ನ ಎನಿಸುವ ಪದ್ಧತಿಯೊಂದು ಫಿಜಿಯ ದಕ್ಷಿಣ ಭಾಗದಲ್ಲಿ ಇದೆ.
ಇಲ್ಲಿ ಒಬ್ಬ ವ್ಯಕ್ತಿ ಸತ್ತರೆ ಆತನಿಗೆ ಪ್ರಿಯವಾದ ವ್ಯಕ್ತಿಗಳ ಕುತ್ತಿಗೆ ಹಿಚುಕಿ ಸಾಯಿಸಲಾಗುತ್ತದೆಯಂತೆ! ಆ ವ್ಯಕ್ತಿಯ ಜೊತೆ ಈ ವ್ಯಕ್ತಿಯ ಶವವನ್ನೂ ಹೂಳಲಾಗುತ್ತದೆ. ಹೀಗೆ ಮಾಡಿದರೆ ಸಾವನ್ನಪ್ಪಿದವರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಅಲ್ಲಿದೆ.