ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದುಹೋಗದ ಕೊಡೆ

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕೆಲವು ವಸ್ತುಗಳನ್ನು ಎಲ್ಲೋ ಇಟ್ಟು ಇನ್ನೆಲ್ಲೋ ಹುಡುಕುವುದರಲ್ಲೇ ಸಮಯ ವ್ಯರ್ಥವಾಗಿ ಹೋಗಿರುತ್ತದೆ. ಅದರಲ್ಲೂ ಮಳೆ ಬಂದ ಸಮಯದಲ್ಲಿ ಕೊಡೆ ಸಿಗದೇ ಹೋದರೆ ಪರದಾಟ ಅಷ್ಟಿಷ್ಟಲ್ಲ. ಹೀಗೆ ಯಾವಾಗಲೂ ಕೊಡೆ ಕಳೆದುಕೊಂಡು ಪರದಾಡುವವರ ಪೈಕಿ ನೀವೂ ಒಬ್ಬರಾಗಿದ್ದಲ್ಲಿ, ನಿಮಗೆ ಈ ಕೊಡೆ ಅನುಕೂಲಕ್ಕೆ ಬರಬಹುದು. ಇದರ ಹೆಸರು ಬ್ಲಂಟ್. ಈ ಕೊಡೆಯ ವಿಶೇಷತೆ ಇರುವುದು ಇದರಲ್ಲಿ ಬಳಸಲಾಗಿರುವ ತಂತ್ರಜ್ಞಾನದಲ್ಲಿ. ಬ್ಲೂಟೂತ್ ಆಧರಿತ ಟೈಲ್ ಎಂಬ ಆ್ಯಪ್ ಅನ್ನು ಕೊಡೆಯಲ್ಲಿ ಅಳವಡಿಸಲಾಗಿದೆ. ಕೊಡೆಯ ಒಂದು ಮೂಲೆಗೆ ಈ ಚಿಪ್ ಅಳವಡಿಸಲಾಗಿದ್ದು, ನಿಮ್ಮ ಸ್ಮಾರ್ಟ್‌ಫೋನಿನಿಂದ 99 ಅಡಿ ಅಂತರದಲ್ಲಿ ಕೆಲಸ ಮಾಡಬಲ್ಲದು. ಸ್ಮಾರ್ಟ್‌ಫೋನ್‌ನಲ್ಲಿ ಬಟನ್ ಒತ್ತಿದರೆ, ನಿಮ್ಮ ಕೈಗೆ ಕೊಡೆ ಸಿಗುವವರೆಗೂ ಅದು ಹಾಡನ್ನು ಹಾಡುತ್ತಲೇ ಇರುತ್ತದೆ. ಕೊಡೆ, ನಿಮ್ಮ ಪರಿಧಿ ಮೀರಿ ಕಳೆದು ಹೋಗಿದ್ದರೆ, ಯಾರಾದರೂ ಕಳ್ಳತನ ಮಾಡಿ ಕೊಂಡೊಯ್ದಿದ್ದರೆ ಮಾತ್ರ ಹುಡುಕುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT