ಮಕ್ಕಳಲ್ಲಿ ನಿದ್ರಾಹೀನತೆ ಉಂಟಾದರೆ ಅದಕ್ಕೆ ಹಲವಾರು ಕಾರಣಗಳು ಇರಬಹುದು. ಮಗು ಗರ್ಭದಲ್ಲಿ ಇರುವಾಗ ಅಮ್ಮ ಮದ್ಯಪಾನ ಸೇವನೆ ಮಾಡಿರುವುದು ಪ್ರಮುಖ ಕಾರಣಗಳಲ್ಲಿ ಒಂದು ಎಂಬ ಅಂಶ ಈಗ ಅಧ್ಯಯನದಿಂದ ತಿಳಿದುಬಂದಿದೆ. ಮಗು ಗರ್ಭದಲ್ಲಿ ಇರುವಾಗ ಅಮ್ಮ ಮದ್ಯಪಾನ ಮಾಡಿದ್ದರೆ ಅದು ಮಗುವಿನ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ.

ಇದರಿಂದ ಮಕ್ಕಳಲ್ಲಿ ನಿದ್ರಾಹೀನತೆ ಉಂಟಾಗುತ್ತದೆ ಎಂದು ಅಮೆರಿಕದ ನರವೈದ್ಯಕೀಯ ತಜ್ಞರ ತಂಡದ ಸಂಶೋಧನೆಯಿಂದ ತಿಳಿದುಬಂದಿದೆ. ಇದು ಎಷ್ಟರಮಟ್ಟಿಗೆ ಎಂದರೆ ಗರ್ಭಿಣಿ ಮದ್ಯಪಾನದ ಸೇವನೆಯನ್ನು ಪದೇ ಪದೇ ಮಾಡಬೇಕೆಂದೇನೂ ಇಲ್ಲ. ಒಂದೇ ಒಂದು ಬಾರಿ ಮಿತಿಮೀರಿ ಕುಡಿದಿದ್ದರೂ ಅದು ಮಗುವಿನ ಮೆದುಳಿನ ಮೇಲೆ ದುಷ್ಪಪರಿಣಾಮ ಉಂಟು ಮಾಡುತ್ತದೆ ಎಂದಿದೆ ಅಧ್ಯಯನ.

ಇದಕ್ಕಾಗಿ ಸಂಶೋಧಕರು ಆಗತಾನೇ ಹುಟ್ಟಿದ ಇಲಿಯ ಮೇಲೆ ಪ್ರಯೋಗ ನಡೆಸಿದ್ದಾರೆ. ಇಲಿಗೆ ಒಂದೇ ಒಂದು ಡೋಸ್ ಮದ್ಯಪಾನವನ್ನು ಇಂಜೆಕ್ಷನ್ ಮೂಲಕ ನೀಡಲಾಗಿತ್ತು. ಇದರ ಮೆದುಳು ಹಾಗೂ ಹೆರಿಗೆಯ ಕೊನೆಯ ಮೂರು ತಿಂಗಳ ಗರ್ಭಿಣಿಯ ಮೆದುಳು ಒಂದೇ ತೆರನಾಗಿ ಕಾರ್ಯ ನಿರ್ವಹಿಸುವ ಕಾರಣ ಈ ಪ್ರಯೋಗ ಮಾಡಲಾಗಿತ್ತು. ಇಲಿಯು ಕೂಡ ಕ್ರಮೇಣ ನಿದ್ದೆಗೆ ಶರಣಾಯಿತು. ಗರ್ಭಿಣಿಯ ದೇಹ ಕೂಡ ಇದೇ ರೀತಿ ವರ್ತಿಸುವ ಕಾರಣ, ಅದು ಗರ್ಭದಲ್ಲಿ ಇರುವ ಮದುವಿನ ಮೆದುಳಿನ ಮೇಲೆ ಪರಿಣಾಮ ಬೀರುವುದನ್ನು ಈ ಮೂಲಕ ಸಂಶೋಧಕರು ಕಂಡುಕೊಂಡರು. ಇಷ್ಟೇ ಅಲ್ಲದೇ ಆ ಇಲಿ ಕ್ರಮೇಣ ತನ್ನ ಜ್ಞಾಪಕ ಶಕ್ತಿಯನ್ನೂ ಕಳೆದುಕೊಂಡಿತಂತೆ!

100 ಮಂದಿ ಮದ್ಯಪಾನ ಪ್ರೇಮಿ ಗರ್ಭಿಣಿಯರ ಪೈಕಿ ಕೊನೆಯ ಪಕ್ಷ ಒಂದು ಮಗು ನಿದ್ರಾಹೀನತೆ ತೊಂದರೆಯಿಂದ ಬಳಲುತ್ತದೆ. ಇನ್ನು ಕೆಲವು ಮಕ್ಕಳು ನಿದ್ದೆಯ ಸಮಸ್ಯೆಯಿಂದ ತೊಂದರೆ ಅನುಭವಿಸುವುದು ಮಾತ್ರವಲ್ಲದೇ ಕಲಿಕೆಯಲ್ಲಿ ಹಿನ್ನಡೆ, ಜ್ಞಾಪಕ ಶಕ್ತಿಯಲ್ಲಿ ಕುಂದುವಿಕೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಹೊಂದುವುದು ಇತ್ಯಾದಿ ತೊಂದರೆಗಳಿಗೂ ಒಳಗಾಗುತ್ತಾರಂತೆ. ಮದ್ಯಪಾನ ಸೇವನೆ ಗರ್ಭಿಣಿಯಲ್ಲಿ ಹೆಚ್ಚಾದರೆ ಮಗು ಅಕಾಲಿಕ ಸಾವನ್ನಪ್ಪುವುದು ಇಲ್ಲವೇ ಗರ್ಭಪಾತ ಆಗುವುದು ಇತ್ಯಾದಿ ಸಮಸ್ಯೆಗಳೂ ಕಾಣಿಸಿಕೊಳ್ಳುವುದಾಗಿ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.