ಬಾಲಿವುಡ್ ನಟ ರಣಬೀರ್ ಕಪೂರ್ ಒಂದು ವಾರ ಭೋಪಾಲ್ ಜೈಲಿನಲ್ಲಿದ್ದರಂತೆ!

ಅವರೇನು ಅಪರಾಧ ಮಾಡಿದ್ದರು ಎಂದು ರಣಬೀರ್ ಅಭಿಮಾನಿಗಳು ಆತಂಕ ಪಡುವಂಥದ್ದು ಏನಿಲ್ಲ ಬಿಡಿ. ಏಕೆಂದರೆ ರಣಬೀರ್ ಜೈಲಿಗೆ ಹೋದದ್ದು ನಟ ಸಂಜಯ್ ದತ್ ಜೀವನ ಚರಿತ್ರೆ ತಿಳಿದುಕೊಳ್ಳಲು.

ರಾಜಕುಮಾರ್ ಹಿರಾನಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ರಣಬೀರ್, ಸಂಜಯ್ ನಟಿಸುತ್ತಿದ್ದಾರೆ. ಜೈಲಿನ ಸನ್ನಿವೇಶಗಳ ಚಿತ್ರೀಕರಣವನ್ನು ಈಚೆಗೆ ಭೋಪಾಲ್ ಜೈಲಿನಲ್ಲಿ ಚಿತ್ರೀಕರಿಸಲಾಯಿತು. ಈ ವೇಳೆ ರಣಬೀರ್, ಜೈಲಿನ ಇತರ ಕೈದಿಗಳ ಜತೆ ಇದ್ದು, ಜೈಲಿನ ಅನುಭವ ಪಡೆದುಕೊಂಡರಂತೆ.

ಸಂಜಯ್ ದತ್ ರೀತಿ ಕಾಣಿಸಿಕೊಳ್ಳುವ ಸಲುವಾಗಿ ರಣಬೀರ್ ಬರೋಬ್ಬರಿ 13 ಕೆ.ಜಿ. ದೇಹದ ತೂಕ ಹೆಚ್ಚಿಸಿಕೊಂಡಿದ್ದಾರಂತೆ. ಅಷ್ಟೇ ಅಲ್ಲ ಸಂಜು ಬಾಬಾ ಹೇರ್‌ಸ್ಟೈಲ್‌ಗಾಗಿ ಉದ್ದ ಕೂದಲು ಬಿಟ್ಟಿರುವ ರಣಬೀರ್, ಥೇಟ್ ಅವರಂತೆಯೇ ಕೂದಲಿನ ವಿನ್ಯಾಸವನ್ನೂ ಬದಲಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದು, ಸೋನಂ ಕಪೂರ್, ದಿಯಾ ಮಿರ್ಜಾ ಕೂಡಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಂಜಯ್ ದತ್ ರೀತಿಯಲ್ಲಿ ಪಕ್ಕಾ ಹಾವಭಾವ ಬದಲಿಸಿಕೊಂಡಿರುವ ರಣಬೀರ್ ಫೋಟೊಗಳು ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಅಪಾರ ಕುತೂಹಲವನ್ನೂ ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.