ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಪ್ರಿಯ ಗೇಲ್‌

Last Updated 14 ಮೇ 2017, 19:30 IST
ಅಕ್ಷರ ಗಾತ್ರ
ಕಪ್ಪು ಬಣ್ಣದ ಟ್ರೆಂಚ್‌ ಕೋಟ್‌, ಜೀನ್ಸ್‌ ಹಾಗೂ ತಲೆಗೆ ಕಪ್ಪು ಪಟ್ಟಿ ಕಟ್ಟಿಕೊಂಡಿದ್ದ ಆರ್‌ಸಿಬಿ ತಂಡದ ಆಟಗಾರ ಕ್ರಿಸ್‌ ಗೇಲ್‌ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಕೂಗು ಜೋರಾಯಿತು. ನೆಚ್ಚಿನ ಆಟಗಾರನೊಂದಿಗೆ ಫೋಟೊ ತೆಗೆಸಿಕೊಳ್ಳಲು ಜನ ಮುಗಿಬೀಳುತ್ತಿದ್ದರು.
 
ಬೆಂಗಳೂರು ಮೂಲದ attitude.com ಮೆನ್ಸ್‌ ಫ್ಯಾಷನ್‌ ಬ್ರಾಂಡ್‌ಗೆ  ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ರಾಯಭಾರಿ ಆಗಿದ್ದಾರೆ. ಈ ವಿಚಾರವನ್ನು ಕಂಪೆನಿ ಅಧಿಕೃತವಾಗಿ ಘೋಷಿಸಲು ಬೆಂಗಳೂರಿನ ಹೋಟೆಲ್‌ನಲ್ಲಿ ಈಚೆಗೆ ಕಾರ್ಯಕ್ರಮ ಆಯೋಜಿಸಿತ್ತು. ಕ್ರಿಸ್‌ ವಿಶೇಷ ಉಡುಪಿನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಉತ್ಸಾಹದಿಂದಲೇ ಹಲವು ಮಾಹಿತಿ ಹಂಚಿಕೊಂಡರು...
 
 
* ಐಪಿಎಲ್‌ ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಆರ್‌ಸಿಬಿ ಕೊನೆ ಸ್ಥಾನದಲ್ಲಿದೆ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆವು ಅನ್ನಿಸುತ್ತಿದ್ದೆಯಾ?
ಹೌದು, ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಬೇಸರವಾಗಿದೆ.  ಅಭಿಮಾನಿಗಳ ಕ್ಷಮೆ ಕೇಳುತ್ತೇನೆ. 
 
* ಬಿಡುವಿನ ಅವಧಿಯಲ್ಲಿ ಏನು ಮಾಡ್ತೀರಿ?
ಮಗಳಿಗಾಗಿ ಬಹಳಷ್ಟು ಸಮಯ ಮೀಸಲಿಡುತ್ತೇನೆ. ಹೋಟೆಲ್‌ನ ಕಾರಿಡಾರ್‌ನಲ್ಲಿ ಆಟವಾಡಿಸುತ್ತೇನೆ, ಈಜುಕೊಳದ ಹತ್ತಿರ  ಕರೆದುಕೊಂಡು ಹೋಗುತ್ತೇನೆ. ರೂಮ್‌ನಲ್ಲಿದ್ದಾಗಲೂ ಮಗಳೊಂದಿಗೆ ಆಟವಾಡುತ್ತೇನೆ.
 
* ಸ್ಫೋಟಕ ಬ್ಯಾಟಿಂಗ್‌ ಹಿಂದಿನ ರಹಸ್ಯವೇನು?
ಒಳ್ಳೆಯ ಆಹಾರ ಸೇವಿಸುತ್ತೇನೆ. ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತೇನೆ. ನಾನು ಬಳಸುವ ಸ್ಪಾರ್ಟನ್‌ ಕಂಪನಿಯ ಬ್ಯಾಟ್‌ ಕೂಡ ಭರ್ಜರಿ ಹೊಡೆತಕ್ಕೆ ಕಾರಣ.
 
* ಸಿಕ್ಕಾಪಟ್ಟೆ ನಿದ್ದೆ ಮಾಡ್ತೀರಂತೆ...
ಹೌದೌದು, ಸಮಯ ಸಿಕ್ಕಾಗಲೆಲ್ಲಾ ಸಾಕಷ್ಟು ನಿದ್ದೆ ಮಾಡುತ್ತೇನೆ. ರಾತ್ರಿ ಹೊತ್ತು ಟಿ.ವಿ ನೋಡುತ್ತೇನೆ. ಬೆಳಿಗ್ಗೆ 6 ಗಂಟೆಗೆ ಎದ್ದು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತೇನೆ. ನಂತರ ನನ್ನ ಕೆಲಸದ ಕಡೆ ಗಮನಕೊಡುತ್ತೇನೆ.
 
* ಒಂದು ವೇಳೆ ನೀವು ಕ್ರಿಕೆಟ್‌ ಆಟಗಾರ ಆಗಿರದಿದ್ದರೆ?
ಪ್ರಪಂಚದ ಅತ್ಯುತ್ತಮ ಫುಟ್‌ಬಾಲ್‌ ಆಟಗಾರ ಆಗಬೇಕೆಂಬ ಆಸೆಯಿತ್ತು.
 
* ಬೆಂಗಳೂರಿನಲ್ಲಿ ನಿಮ್ಮ ಇಷ್ಟದ ಸ್ಥಳಗಳು?
ಯು.ಬಿ.ಸಿಟಿ ಮತ್ತು ಇಲ್ಲಿನ ದೇವಸ್ಥಾನಗಳನ್ನು ನೋಡಿದ್ದೇನೆ.  ಆ ದೇವಸ್ಥಾನಗಳ ಹೆಸರು ನೆನಪಿಲ್ಲ. ಇಲ್ಲಿನ ರಾತ್ರಿ ಜೀವನವೂ ಚೆನ್ನಾಗಿರುತ್ತದೆ.
 
* ಭಾರತೀಯ ಸಿನಿಮಾಗಳನ್ನು ನೋಡುತ್ತೀರಾ?
ನಾನು ಸಿನಿಮಾ ನೋಡುತ್ತೇನೆ. ಶಾರುಖ್‌ಖಾನ್‌ ಅವರ ತಂಡದಲ್ಲಿದ್ದಾಗ ಕೆಲವು ಹಿಂದಿ ಚಿತ್ರಗಳನ್ನು ನೋಡಿದ್ದೇನೆ. ಆದರೆ ಹೆಸರು ಹೇಳಲು ನೆನಪಾಗುತ್ತಿಲ್ಲ. ದೀಪಿಕಾ ಪಡುಕೋಣೆ ಪರಿಚಯವಿದೆ. ಅಮಿತಾಭ್‌ ಬಚ್ಚನ್‌ ಅವರ ಮನೆಗೆ ಹೋಗಿದ್ದೇನೆ. ಸಿನಿಮಾದಲ್ಲಿ ನಟರನ್ನು ನೋಡಿದರೆ ಯಾರು ಎಂಬುದನ್ನು ಗುರುತಿಸಬಲ್ಲೆ.
 
* ನಿಮ್ಮ ಇಷ್ಟದ ಲೋಕಲ್ ತಿನಿಸುಗಳು...
ಬಟರ್‌ ಚಿಕನ್‌, ಚಿಕನ್‌ ಕಾಟಿ ರೋಲ್‌, ಫಿಶ್‌ ಕರ್ರಿ.
****
‘ಸಿಕ್ಸ್‌ ಮಷೀನ್‌’ ಕುರಿತು....
ಜನನ: 21 ಸೆಪ್ಟೆಂಬರ್‌ 1979
ಪೂರ್ಣ ಹೆಸರು: ಕ್ರಿಸ್ಟೋಫರ್‌ ಹೆನ್ರಿ ಗೇಲ್‌,
ಜನ್ಮ ಸ್ಥಳ: ಕಿಂಗ್‌ಸ್ಟನ್‌, ಜಮೈಕಾ
ಪತ್ನಿ: ನತಾಶಾ ಬ್ಯಾರಿಡ್ಜ್‌
ಅಡ್ಡಹೆಸರು: ಗೇಲ್‌–ಫೋರ್ಸ್‌, ಗೇಲ್‌–ಸ್ಟಾರ್ಮ್‌, ವರ್ಲ್ಡ್‌ ಬಾಸ್‌, ಮಾಸ್ಟರ್‌ ಸ್ಟಾರ್ಮ್‌, ಸಿಕ್ಸ್‌ ಮಷೀನ್‌
ಎತ್ತರ: 6.2 ಅಡಿ,
ಬ್ಯಾಟಿಂಗ್‌ ಶೈಲಿ: ಎಡಗೈ
ಬೌಲಿಂಗ್‌ ಶೈಲಿ: ಬಲಗೈ ಆಫ್‌ಸ್ಪಿನ್‌
ತೂಕ: 98 ಕೆ.ಜಿ
ಹವ್ಯಾಸ: ನೃತ್ಯ, ಜಾಲಿರೈಡ್‌
ಕಿಂಗ್‌ಸ್ಟನ್‌ನ ಲೂಕಾಸ್ ಕ್ಲಬ್‌ಗೆ ಆಡುವ ಮೂಲಕ ಕ್ರಿಕೆಟ್ ಜೀವನ ಆರಂಭಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT