ಮನೆಯಲ್ಲಿ ತುಳಸಿಕಟ್ಟೆಗೆ ಪೂಜೆ ಮಾಡುತ್ತಾ ‘ಜೈ ಗಣೇಶ್ ಜೈಗಣೇಶ್ ದೇವಾ...’ ಎಂದು ಭಕ್ತಿಗೀತೆ ಹಾಡುವ, ಮನೆ ಹೊರಗೆ ಹೊಡೆಯುವ, ಕೊಚ್ಚುವ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡವರು ಸಂಜಯ್ ದತ್. ಅವರ ಮುದ್ದಾದ ಮಗಳು ಭೂಮಿ. ಇದೀಗ ದತ್ ಮಗಳದೇ ಹೆಸರಿನ ಸಿನಿಮಾ ‘ಭೂಮಿ’ ಸುದ್ದಿ ಮಾಡುತ್ತಿದೆ. ದತ್ ಪ್ರಮುಖ ಪಾತ್ರ ವಹಿಸಿರುವ ಸಾಹಸ ಪ್ರಧಾನ ಮತ್ತು ಸ್ತ್ರೀ ಮೌಲ್ಯಗಳನ್ನು ತಿಳಿಸುವ ಸಿನಿಮಾವಿದು. ಈಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು. ವಿಡಿಯೊ ವೈರಲ್ ಆಗಿದೆ. ಅದಿತಿ ರಾವ್ ಹೈದರಿ ‘ಭೂಮಿ’ ಪಾತ್ರ ನಿರ್ವಹಿಸಿದ್ದಾರೆ.