ಸಂಚಾರ ದಟ್ಟಣೆಯ ವಾಯುಮಾಲಿನ್ಯ ಪರಿಸರದಲ್ಲಿರುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳಿಗೆ ಐದು ವರ್ಷದೊಳಗೆ ಅಸ್ತಮಾ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಹೆದ್ದಾರಿ ಸಮೀಪದ ವಾಸಿಸುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳಲ್ಲಿ, ಶೇಕಡ 25ರಷ್ಟು ಮಕ್ಕಳು ಅಸ್ತಮಾ ಸಂಬಂಧಿಸಿದಂತ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು, ಹಸುಗೂಸಿನಿಂದ 10 ವರ್ಷ ವಯಸ್ಸಿನ ಸುಮಾರು 65 ಸಾವಿರ ಮಕ್ಕಳನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

ಸಂಚಾರ ದಟ್ಟಣೆಯ ವಾಯುಮಾಲಿನ್ಯದಲ್ಲಿ ಸಣ್ಣ ದೂಳಿನ ಕಣಗಳು, ಕಪ್ಪು ಇಂಗಾಲ, ನೈಟ್ರೋಜನ್ ಆಕ್ಸೈಡ್, ನೈಟ್ರಿಕ್ ಆಕ್ಸೈಡ್ ಇದ್ದು, ಇಂಥ ಪರಿಸರದಲ್ಲಿ ಹುಟ್ಟುವ ಮಕ್ಕಳಲ್ಲಿ ಅಸ್ತಮಾ ಬರುವ ಸಾಧ್ಯತೆ ಹೆಚ್ಚು. ಅದರಲ್ಲೂ ಜನಿಸಿದಾಗ ಕಡಿಮೆ ತೂಕವಿರುವ ಶಿಶುಗಳಲ್ಲಿ ವಾಯುಮಾಲಿನ್ಯದಿಂದಾಗಿ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

‘ಗರ್ಭಾವಸ್ಥೆಯಲ್ಲಿರುವ ಶಿಶುಗಳ ಮೇಲೆ ವಾಯುಮಾಲಿನ್ಯ ಬೀರುವ ಪರಿಣಾಮಗಳನ್ನು ನಮ್ಮ ಅಧ್ಯಯನದ ಫಲಿತಾಂಶ ಪ್ರತಿಪಾದಿಸುತ್ತದೆ. ವಾಯುಮಾಲಿನ್ಯದಿಂದಾಗಿ ಶಾಲೆಗೆ ಹೋಗುವ ಮುನ್ನವೇ ಪುಟ್ಟ ಮಕ್ಕಳು ಶ್ವಾಸಕೋಶ ಸಂಬಂಧೀ ಕಾಯಿಲೆಗಳಿಂದಾಗಿ ಬಳಲುವಂತಾಗಿದೆ’ ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕಿ ಹಿಂದ್ ಸಬಿಹಿ ಹೇಳಿದ್ದಾರೆ. ಈ ಬಗ್ಗೆ ಯುರೋಪಿಯನ್ ರೆಸ್ಪಿರೆಟರಿ ಜರ್ನಲ್ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.