ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈ ನವಿರೇಳಿಸುವ ಪಯಣ ‘ಪ್ಯಾಸೆಂಜರ್’

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

ಬಾಕ್ಸ್‌ನೊಳಗೆ ಮಲಗಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತಾನೆ. ಎದ್ದು ನೋಡಿದರೆ ಸುತ್ತಮುತ್ತ  ಯಾರೂ ಇಲ್ಲ.  ಯಾರಾದರೂ ಇದ್ದೀರಾ ಎಂಬ ಅವನ ಕೂಗಿಗೆ ಉತ್ತರಿಸುವವರಾರು ಅಲ್ಲಿಲ್ಲ. ಇದ್ದರೂ ಅವರೆಲ್ಲಾ ಗಾಢವಾದ ನಿದ್ದೆಯಲ್ಲಿದ್ದಾರೆ. ಹಾಗೆ ಕೂಗುತ್ತಾ ಸುತ್ತಮುತ್ತ ನೋಡುತ್ತಿದ್ದವನ ಕಣ್ಣಿಗೆ ಅವಳು ಕಾಣುತ್ತಾಳೆ. ಅವಳನ್ನು ನೋಡಿದ ಮೇಲೆ ಅವನ ಮನಸಿಗೊಂದು ಸಮಾಧಾನ.

ತಾವು ಎಲ್ಲಿದ್ದೇವೆ. ಸುತ್ತಮುತ್ತ ಏನು ಸಂಭವಿಸುತ್ತಿದೆ ಎನ್ನುವುದು ಅವರಿಬ್ಬರಿಗೂ ಅರ್ಥವಾಗಲು ಸಮಯ ಹಿಡಿಯುವುದಿಲ್ಲ. ಅದೊಂದು ಅನ್ಯಗ್ರಹ ಯಾನ. ಮಹಾ ವಲಸೆ ಎಂಬಂತೆ ನೂರಾರು ಜನರನ್ನು ತುಂಬಿಕೊಂಡ ನೌಕೆಯೊಂದು ಅಂತರಿಕ್ಷದಲ್ಲಿ ತೇಲುತ್ತಿರುತ್ತಿದೆ. ಈ ಪಯಣದಲ್ಲಿ ಅವರಿಬ್ಬರೂ ತಮ್ಮ ನಿಗದಿತ 90 ವರ್ಷಗಳು ಪೂರೈಸುವ ಮುನ್ನವೇ ಎಚ್ಚರಗೊಳ್ಳುತ್ತಾರೆ.

ಇದು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಇಂಗ್ಲಿಷ್‌ ಸಿನಿಮಾ ‘ಪ್ಯಾಸೆಂಜರ್’ನ ದೃಶ್ಯಗಳು. ಗಮ್ಯವೊಂದನ್ನು ತಲುಪುವ ಮುನ್ನವೇ ಎಚ್ಚರಗೊಂಡ ಪ್ರೇಮಿಗಳಿಬ್ಬರ ಸಾಹಸಯಾನವನ್ನು ‘ಪ್ಯಾಸೆಂಜರ್’ ರೋಚಕವಾಗಿ ನಿರೂಪಿಸುತ್ತಾ ಹೋಗುತ್ತದೆ.

ಅಂತರಿಕ್ಷದಲ್ಲಿದ್ದರೂ ಪ್ರೀತಿ,ಪ್ರೇಮ, ಪ್ರಣಯದ ಕೊರತೆ ಅನುಭವಿಸದ ಆ ಜೋಡಿಗಳಿಗೆ  ಡ್ರಿಂಕ್ಸ್‌ ಮಿಕ್ಸ್‌ ಮಾಡಿಕೊಡಲು ಒಬ್ಬಾತ ಸಿದ್ಧವಿರುತ್ತಾನೆ. ತಮ್ಮಿಬ್ಬರ ನಡುವೆ ಮೂಗು ತೂರಿಸಬೇಡ ಎಂದಾಕೆಯ ಮಾತಿಗೆ ಆ ಕಡೆ ತಿರುಗಿದ ವೇಟರ್‌ಗೆ ಎರಡೂ ಕಾಲಿಗಳಿಲ್ಲ. ಆದರೂ ಅವನು  ಯಂತ್ರಚಾಲಿತ ಕಾಲುಗಳಿಂದ ಸರಾಗವಾಗಿ ಓಡಾಡಬಲ್ಲ.

ಹೀಗೆ ಚಿತ್ರದುದ್ದಕ್ಕೂ ಮೈನವಿರೇಳಿಸುವ ದೃಶ್ಯಗಳ ಮಣಿಹಾರದಂತಿದೆ ‘ಪ್ಯಾಸೆಂಜರ್’. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಚಿತ್ರವನ್ನು ಮಾರ್ಟೆಲ್ ಟೈಲ್‌ಡೆಂ ನಿರ್ದೇಶಿಸಿದ್ದಾರೆ.

ಕ್ರಿಸ್ ಪ್ರಾಟ್‌, ಜೆನಿಫರ್ ಲಾರೆನ್ಸ್ ಪ್ರಮಖ ಪಾತ್ರದಲ್ಲಿರುವ ಈ ಚಿತ್ರ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ₹ 863 ಕೋಟಿ ಬಾಚಿದೆ. (ಹಾಕಿದ ಬಂಡವಾಳ ₹747 ಕೋಟಿ).ಈಗಾಗಲೇ ಯೂಟ್ಯೂಬ್‌ನಲ್ಲಿ ಚಿತ್ರದ  ಹಲವು ಟ್ರೇಲರ್‌ಗಳು ಬಿಡುಗಡೆಯಾಗಿದ್ದು, ಇವುಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT