ಹೊಟ್ಟೆ ಹಸಿವಿನಿಂದ ಚುರುಗುಡುತ್ತಿದ್ದೆ. ತಿನ್ನೋಕೆ ಏನೂ ಇಲ್ಲ. ಅಂಥ ಸಂದರ್ಭದಲ್ಲಿ ನಮ್ಮ ದೇಹದ ಭಾಗಗಳನ್ನೇ ಒಂದೊಂದಾಗಿ ತಿಂದರೆ?

ಊಹಿಸಿಕೊಳ್ಳುವುದೂ ಕಷ್ಟ ಅಲ್ಲವೆ. ಆದರೆ ವರ್ಷವರ್ಷಗಳಿಂದ ನಾವು ಮಾಡುತ್ತಿರುವುದು ಇದನ್ನೇ! ಹೇಗೆ ಅಂತೀರಾ, ನಮ್ಮ ದೇಹದಲ್ಲಿರುವ ಜೀವಕೋಶಗಳ ಮೂಲಕ.

ಜೀವಂತ ಕೋಶಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಅಂಥ ಸಂದರ್ಭದಲ್ಲಿ ದೇಹದಲ್ಲಿರುವ ಅನಗತ್ಯ ಹಾಗೂ ಕೆಲಸಕ್ಕೆ ಬಾರದ ಭಾಗಗಳನ್ನು (ಕಾಂಪೊನೆಂಟ್ಸ್) ಕೋಶಗಳು ತಿನ್ನುತ್ತವೆ. ಇದರಿಂದ ಎಮಿನೊ ಆಮ್ಲ ಹಾಗೂ ಅಗತ್ಯ ಪೌಷ್ಟಿಕಾಂಶ ಉತ್ಪತ್ತಿಯಾಗಿ ಕೋಶಗಳಿಗೆ ಶಕ್ತಿ ದೊರೆತು, ಅವು ಸಹಜ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುತ್ತದೆ. ಈ ಕ್ರಿಯೆಗೆ ಸ್ವಯಂ ಭಕ್ಷಣೆ (autophagy) ಎನ್ನಲಾಗುತ್ತದೆ.

ಸ್ವಯಂ ಭಕ್ಷಣೆಯಿಂದಾಗಿ ಕೋಶಗಳು ಹಸಿವಿನಿಂದ ರಕ್ಷಣೆ ಪಡೆಯುವುದಷ್ಟೇ ಅಲ್ಲ, ಸಮತೋಲನವನ್ನೂ ಕಾಪಾಡಿಕೊಳ್ಳುತ್ತವೆ. ಈ ಕ್ರಿಯೆಯೇ ಕೋಶಗಳ ದೀರ್ಘಾಯುಷ್ಯದ ಗುಟ್ಟು.

ಸ್ವಯಂಭಕ್ಷಣೆಯಿಂದಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಸಮಸ್ಯೆ ಇದ್ದಲ್ಲಿ ಪಾರ್ಕಿನ್‌ಸನ್‌ನಂಥ ನರಸಂಬಂಧಿ ಕಾಯಿಲೆ ಉಂಟಾಗುವ ಸಾಧ್ಯತೆಯೂ ಹೆಚ್ಚು. ಸ್ವಯಂಭಕ್ಷಕಗಳು, ಕೋಶಗಳು ಹಾಗೂ ಜೀವಕಣಗಳನ್ನು ಆರೋಗ್ಯವಾಗಿಡುತ್ತವೆ. ದೋಷಯುಕ್ತ ಕೋಶಗಳನ್ನು ಹಾಗೂ ದೋಷಯುಕ್ತ ಪ್ರೊಟೀನ್ ಅಂಶಗಳನ್ನು ತೆಗೆದುಹಾಕಿ ದೇಹವನ್ನು ಸೋಂಕು ಹಾಗೂ ಕ್ಯಾನ್ಸರ್‌ನಿಂದ ರಕ್ಷಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.