ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಿಸೆ ಹಣ್ಣಿನ ಸಿಹಿ ವಿಷಯ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಡುಗೆ ರುಚಿ ಹೆಚ್ಚಿಸುವ ಹುಣಿಸೆ ಹಣ್ಣು ಸೌಂದರ್ಯವನ್ನು ವೃದ್ಧಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನಿ ‘ಸಿ’ ಹೆಚ್ಚಿದ್ದು ಇದು ಚರ್ಮಕ್ಕೆ ಒಳ್ಳೆಯದು. ಈ ಹಣ್ಣಿನ ಬಳಕೆ ಹೀಗೆ ಮಾಡಬಹುದು.

* ಕಪ್ಪಾಗಿರುವ ಕುತ್ತಿಗೆಯ ಸುತ್ತ ಹುಣಿಸೆ ಹಣ್ಣಿನ ತಿರುಳನ್ನು ಹಚ್ಚಿ ಮಸಾಜ್ ಮಾಡಿ. ಇದು ಚರ್ಮದಲ್ಲಿನ ಕೊಳೆಯನ್ನು ತೆಗೆಯುತ್ತದೆ.

*ಮಂಡಿ, ಮೊಣಕೈ ಬಳಿ ಚರ್ಮ ಬೇಗ ಕಪ್ಪಾಗಿಬಿಡುತ್ತದೆ, ಇದಕ್ಕೆ ಹುಣಿಸೆ ಹಚ್ಚಬಹುದು. ಹಣ್ಣಿನ ತಿರುಳಿಗೆ ಉಪ್ಪು ಬೆರೆಸಿ ಮಸಾಜ್ ಮಾಡಬೇಕು. ನಂತರ ಹಾಲಿನಲ್ಲಿ ನೆನೆಹಾಕಿದ ಕಾಟನ್ ಪ್ಯಾಡ್ ಅನ್ನು ಚರ್ಮದ ಮೇಲೆ ಇರಿಸಿ ಒಂದು ಗಂಟೆ ಬಿಟ್ಟು ತೊಳೆಯಿರಿ.

*ಹುಣಿಸೆ ಹಣ್ಣಿನ ತಿರುಳು, ಸಕ್ಕರೆ, ಕಡಲೆಹಿಟ್ಟು ಕ್ರಮವಾಗಿ ಎಲ್ಲವನ್ನು ಒಂದೊಂದು ಚಮಚ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ. ಇದು ಕಲೆಗಳನ್ನು ನಿವಾರಿಸುತ್ತದೆ.

*ತಲೆ ಹೊಟ್ಟು ನಿವಾರಣೆಗೆ ಈ ಹಣ್ಣು ಉತ್ತಮ ಮದ್ದು. ಹಣ್ಣಿನ ತಿರುಳನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ. ಕೂದಲಿನ ಬುಡಕ್ಕೆ ಹಚ್ಚಿ 10 ನಿಮಿಷದ ನಂತರ ತೊಳೆಯಿರಿ. ಒಣ ಕೂದಲಾದರೆ ಇದರೊಂದಿಗೆ ಕೊಬ್ಬರಿ ಎಣ್ಣೆ ಸೇರಿಸಬಹುದು.

*ಬಿಸಿಲಿಗೆ ಮುಖ ಕಪ್ಪಾಗಿದ್ದರೆ. ಬಾಳೆಹಣ್ಣಿನ ಪೇಸ್ಟ್‌ ಒಂದು ಚಮಚ, ಹುಣಿಸೆ ಹಣ್ಣಿನ ಪೇಸ್ಟ್‌ ಎರಡು ಚಮಚ ಮಿಶ್ರಣ ಮಾಡಿ ಮುಖ್ಕಕೆ ಹಚ್ಚಿ. ಹತ್ತು ನಿಮಿಷದ ನಂತರ ಹಾಲು ಬಳಸಿ ಮುಖವನ್ನು ಮಸಾಜ್ ಮಾಡುತ್ತಾ ಫೇಸ್‌ಪ್ಯಾಕ್ ತೆಗೆಯಿರಿ.

*ಕಾಲಿನ ಉಗುರು ಕೊಳೆಯಾಗಿದ್ದರೆ ಹುಣಿಸೆ ಹಣ್ಣಿನ ರಸದಲ್ಲಿ ಕಾಲನ್ನು 15 ನಿಮಿಷ ನೆನೆಸಿ. ನಂತರ ಉಪ್ಪು, ಶ್ಯಾಂಪು ಮಿಶ್ರಣ ಮಾಡಿ ಅದರಿಂದ ಪಾದವನ್ನು ಸ್ಕ್ರಬ್ ಮಾಡಿ.

*ಹುಣಿಸೆ ಹಣ್ಣಿನಲ್ಲಿ ಪೀಲ್ ಮಾಸ್ಕ್‌ ಅನ್ನು ಮಾಡಬಹುದು. ಹಣ್ಣಿನ ತಿರುಳನ್ನು ಕುದಿಸಿ ಗಟ್ಟಿ ಮಾಡಿಕೊಳ್ಳಿ. ನಂತರ ಈ ಪೇಸ್ಟ್‌ಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ಪೀಲ್‌ ಅನ್ನು ತೆಗೆಯಿರಿ. ಇದು ಮುಖದ ಮೇಲಿರುವ ಬೇಡದ ಕೂದಲನ್ನು ತೆಗೆಯುತ್ತದೆ.

*ದೇಹಕ್ಕೆ ಸ್ಕ್ರಬ್‌ ಆಗಿಯೂ ಹುಣಿಸೆ ಹಣ್ಣನ್ನು ಬಳಸಬಹುದು. ಇದಕ್ಕೆ ನಾರು ತೆಗೆಯದ ಇಡೀ ಹಣ್ಣನ್ನು ಬಳಸಬೇಕು. ಹಾಲಿನೊಂದಿಗೆ ಅರ್ಧ ಗಂಟೆ ಈ ಹಣ್ಣನ್ನು ನೆನೆಸಿ ನಂತರ ಇದನ್ನು ದೇಹಕ್ಕೆ ಹಚ್ಚಿ ಸ್ಕ್ರಬ್‌ ಮಾಡಿಕೊಳ್ಳಬಹುದು. ಇದು ಚರ್ಮವನ್ನು ಪಾಲಿಶ್ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT