ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈಕುಂಠ’ದಲ್ಲಿ ತಂಗಿದ್ದ ನೆಹರು, ಇಂದಿರಾ

Last Updated 20 ಜುಲೈ 2015, 19:41 IST
ಅಕ್ಷರ ಗಾತ್ರ

ಜವಾಹರ್‌ಲಾಲ್‌ ನೆಹರು ಹಾಗೂ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ‘ವೈಕುಂಠ’ದಲ್ಲಿ ನೆಲೆಸಿದ್ದರು ಎಂಬ ದಾಖಲೆಗಳು ಈಗ ಸಿಕ್ಕಿವೆ.

ಅಂದಹಾಗೆ ‘ವೈಕುಂಠ’, ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸಮೀಪ ಇರುವ ತುಂಗಭದ್ರಾ ಜಲಾಶಯದ ಬಳಿ ಇರುವ ವಸತಿಗೃಹ. ಸುಂದರ ಪ್ರಕೃತಿಯ ಮಡಿಲಿನಲ್ಲಿ ಇರುವ ಈ ವಸತಿಗೃಹವು ಸುಖನಿದ್ರೆಗೆ ಪ್ರಸಿದ್ಧಿಯಾಗಿದೆ.  1951ರಲ್ಲಿ ಈ ಅತಿಥಿಗೃಹದ ಶಂಕುಸ್ಥಾಪನೆ ನೆರವೇರಿದೆ. 1952ರಲ್ಲಿ ಜವಾಹರ್‌ಲಾಲ್‌ ನೆಹರು ಅವರು ಭೇಟಿ ನೀಡಿರುವ ಕುರಿತು ವಸತಿಗೃಹದ ‘ವಿಸಿಟರ್‌ ಪುಸ್ತಕ’ದಲ್ಲಿ ದಾಖಲೆಗಳಿವೆ.

ವಸತಿಗೃಹದ ಪಕ್ಕದಲ್ಲಿ ‘ಪಂಪಾ ದರ್ಶನ’ ಎಂಬ ಗೋಪುರವಿದ್ದು, ಇದರ ಮೇಲೆ ನಿಂತು ನೋಡಿದರೆ ಹಂಪಿಯ ದರ್ಶನವಾಗುತ್ತದೆ. ಹೊಸಪೇಟೆ ನಗರದ ವಿಹಂಗಮ ನೋಟ, ತುಂಗಭದ್ರಾ ನದಿ ಹರಿವು, ನವನವೀನ ನಂದನವನ, ಜಲಾಶಯದಿಂದ ಹರಿಯುವ ಕಾಲುವೆಗಳನ್ನು ಇಲ್ಲಿಂದ ನೋಡಿ ಕಣ್ತುಂಬಿಕೊಳ್ಳಬಹುದು.

1992ರ ಸಮಯದಲ್ಲಿ ತುಂಗಭದ್ರಾ ಜಲಾಶಯದಿಂದ ಎರಡು ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್‌ ನೀರು ನದಿ ಮೂಲಕ ಹರಿದು ಅಪಾರ ಹಾನಿ ಹಾಗೂ ಹಂಪಿಯ ಮಂಟಪಗಳಲ್ಲಿದ್ದ ಕನ್ನಡ ವಿಶ್ವವಿದ್ಯಾಲಯ ಜಲಾವೃತಗೊಂಡಿತ್ತು. ಅದರ ಪರಿಹಾರ ಕಾರ್ಯಕ್ರಮದ ಸಭೆಗೆ ಸಾಕ್ಷಿಯಾದದ್ದು ಇದೇ ವೈಕುಂಠ ಅತಿಥಿ ಗೃಹ. ಇದರಲ್ಲಿ ಭಾಗವಹಿಸಲು ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಬಂದಾಗಲೂ ಇಲ್ಲಿಯೇ ತಂಗಿದ್ದರು.

1983ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿದ್ದ ಅಶೋಕನಾಥ ಬ್ಯಾನರ್ಜಿಯವರು ಕಾರ್ಯಕ್ರಮವೊಂದರ ನಿಮಿತ್ತ ಇದೇ ವೈಕುಂಠ ಅತಿಥಿಗೃಹದಲ್ಲಿ ತಂಗಿದ್ದರು. ಅವರ ಎತ್ತರ ಆರು ಅಡಿಗಿಂತಲೂ ಹೆಚ್ಚಿದ್ದ ಕಾರಣ ಇಲ್ಲಿ ಅವರಿಗಾಗಿಯೇ ವಿಶೇಷವಾಗಿ ಏಳು ಅಡಿ ಉದ್ದದ ಮಂಚದ ವ್ಯವಸ್ಥೆ ಮಾಡಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT