ಈ ಬಿಂಪು ಫೌಂಡೇಶನ್, ಶಿಶುಗಳಿಗಾಗಿ ‘ಮಥಾಯಿ’ ಎಂಬ ಆರೋಗ್ಯ ಕಿಟ್ ಅನ್ನು ತಯಾರಿಸುತ್ತಿದೆ. ತೊಟ್ಟಿಲು ಮಾದರಿಯಲ್ಲಿರುವ ಈ ಕಿಟ್ನಲ್ಲಿ ಎಲ್ಲ ರೀತಿಯ ವೈದ್ಯಕೀಯ ಸಾಮಗ್ರಿಗಳು ಇರುತ್ತವೆ ಹಾಗೂ ಇದಕ್ಕೆ ‘ಏರ್ ಕೂಲರ್’ ಅಳವಡಿಸಲಾಗಿರುತ್ತದೆ. ಹುಟ್ಟಿದ ಶಿಶುವನ್ನು ಇದರ ಒಳಗೆ ಹಾಕುವುದರಿಂದ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ರತುಲ್.
ಉದಾಹರಣೆಗೆ, 35 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮಗು ಜನಿಸಿದರೆ ಆ ಉಷ್ಣತೆಯನ್ನು ನವಜಾತಶಿಶು ತಡೆದುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಶಿಶುವನ್ನು ವೆಂಟಿಲೇಟರ್ನಲ್ಲಿ ಇಡಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ಸೌಲಭ್ಯಗಳು ಇರುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ಮಗು ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದನ್ನು ಮನಗಂಡು ಮಥಾಯಿ ಕಿಟ್ ತಯಾರಿಸಿರುವುದಾಗಿ ರತುಲ್ ಹೇಳುತ್ತಾರೆ. 2000 ರೂಪಾಯಿಗೆ ದೊರೆಯುವ ಈ ಕಿಟ್ನಲ್ಲಿ ಮಗುವಿಗೆ ಅಗತ್ಯವಾಗಿ ನೀಡಬೇಕಾಗಿರುವ ಲಸಿಕೆಗಳು ಇರುತ್ತವೆ.
ರತುಲ್ ಓದಿದ್ದು ಬಯೋ ಕೆಮಿಕಲ್ ಪದವಿ. ಇವರ ತಂದೆ ವಿಶ್ವಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಜತೆ ಅಭಿವೃದ್ಧಿ ಹೊಂದುತ್ತಿರುವ ದೇಶ ಮತ್ತು ಬಡ ರಾಷ್ಟ್ರಗಳನ್ನು ಸುತ್ತುವ ಅವಕಾಶ ಲಭಿಸಿತ್ತು.
ಬಡ ದೇಶಗಳಲ್ಲಿ ವೈದ್ಯಕೀಯ ಸೇವೆ ಇಲ್ಲದೆ ಶಿಶುಗಳು ಸಾವನ್ನಪ್ಪುತ್ತಿರುವ ಘಟನೆಗಳು ರತುಲ್ ಅವರ ಮನಕಲಕಿತ್ತು. ನಂತರದ ದಿನಗಳಲ್ಲಿ ಅವರು ಬಿಂಪು ಫೌಂಡೇಶನ್ ಸ್ಥಾಪಿಸಿ ನವಜಾತ ಶಿಶುಗಳ ಆರೈಕೆ ಮಾಡುವ ಕೆಲಸವನ್ನು ಆರಂಭಿಸಿದರು. ಈ ಸಂಸ್ಥೆ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. www.bimpu.com
ಮನು ಪ್ರಕಾಶ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.