ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌:ಮೈಸೂರಿನ ಕೌಟಿಲ್ಯ ವಿದ್ಯಾಲಯಕ್ಕೆ ಪ್ರಶಸ್ತಿ

ಬ್ರಹ್ಮಾವರದ ಲಿಟಲ್‌ ರಾಕ್‌ ರನ್ನರ್‌ಅಪ್‌
Last Updated 24 ಜನವರಿ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ಕೌಟಿಲ್ಯ ವಿದ್ಯಾಲಯದ ತಂಡವು ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌ನ ಐದನೇ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಇಲ್ಲಿ ಗುರುವಾರ ನಡೆದ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ, ಮಂಗಳೂರು ವಲಯದಿಂದ ಆಯ್ಕೆಯಾಗಿದ್ದ ಬ್ರಹ್ಮಾವರದ ಲಿಟ್ಲ್‌ ರಾಕ್‌ ಇಂಡಿಯನ್‌ ಸ್ಕೂಲ್‌ ತಂಡವು ರನ್ನರ್‌ ಅಪ್‌ ಪ್ರಶಸ್ತಿ ಗೆದ್ದಿತು. ಬೆಂಗಳೂರು ವಲಯದಿಂದ ಆಯ್ಕೆಯಾಗಿದ್ದ ಆರ್‌.ಟಿ.ನಗರದ ಪ್ರೆಸಿಡೆನ್ಸಿ ಸ್ಕೂಲ್‌ ತಂಡವು ಮೂರನೇ ಸ್ಥಾನ ಪಡೆಯಿತು.

ಐದು ಸುತ್ತುಗಳಿಂದ ಕೂಡಿದ್ದ ಕ್ವಿಜ್‌ನಲ್ಲಿ ಕೌಟಿಲ್ಯ ವಿದ್ಯಾಲಯ ತಂಡದಕೌಶಿಕ್‌ ನಂದನ್‌ ಹಾಗೂ ಸಚಿತ್‌ ಶೆಟ್ಟಿ ಒಟ್ಟು 105 ಅಂಕಗಳನ್ನು ಕಲೆ ಹಾಕಿ ಅಗ್ರಸ್ಥಾನ ಪಡೆದರು. ಫೈನಲ್‌ನಲ್ಲಿ ಲಿಟ್ಲ್‌ ರಾಕ್‌ ಇಂಡಿಯನ್‌ ಸ್ಕೂಲ್‌ ಹಾಗೂ ಪ್ರೆಸಿಡೆನ್ಸಿ ಸ್ಕೂಲ್‌ ತಂಡ ತಲಾ 103 ಅಂಕ ಗಳಿಸುವ ಮೂಲಕ ಸಮಬಲ ಸಾಧಿಸಿದವು. ಟೈಬ್ರೇಕರ್‌ ಸುತ್ತಿನಲ್ಲಿ ಬಜರ್‌ ಒತ್ತಿ ಸರಿಯಾದ ಉತ್ತರ ನೀಡುವ ಮೂಲಕ ಲಿಟ್ಲ್‌ ರಾಕ್‌ ತಂಡದಧ್ರುಹಾನ್‌ ಶಾ ಮತ್ತು ಪ್ರಭಾವ್‌ ಶೆಟ್ಟಿ ಎರಡನೇ ಸ್ಥಾನ ಪಡೆದರು. ಪ್ರೆಸಿಡೆನ್ಸಿ ಸ್ಕೂಲ್‌ ದಕ್ಷ್‌ ಶೆಟ್ಟರ್‌ ಹಾಗೂ ಅನನ್ಯಾ ಪಾಟೀಲ ರಾವ್‌ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಧಾರವಾಡದ ಶ್ರೀನಿಕೇತನ ಶಾಲೆಯ ತೇಜಸ್ವಿ ಹಾಗೂ ನಿಶ್ಚಿತ್‌ ನಾಲ್ಕನೇ ಸ್ಥಾನ ಪಡೆದರು. ಹಾಸನದ ಕ್ರೈಸ್ಟ್‌ ಸ್ಕೂಲ್‌ ಹಾಗೂ ಕಲಬುರ್ಗಿಯ ಚಂದ್ರಕಾಂತ ಪಾಟೀಲ ಇಂಗ್ಲಿಷ್‌ ಸ್ಕೂಲ್‌ ನಡುವೆ ಐದನೇ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಟೈಬ್ರೇಕರ್‌ನಲ್ಲಿ ಚಂದ್ರಕಾಂತ ಪಾಟೀಲ ಸ್ಕೂಲ್‌ ತಂಡದ ವೀರಜ್‌ ಹಾಗೂ ಆದಿತ್ಯ ಸರಿ ಉತ್ತರ ನೀಡಿದರು. ಕ್ರೈಸ್ಟ್‌ ಸ್ಕೂಲ್‌ನ ಜೋಬಿನ್‌ ವರ್ಗೀಸ್‌ ಹಾಗೂ ಸ್ಟೀವನ್‌ ನಿರಾಸೆ ಅನುಭವಿಸಿದರು.

ಪ್ರಶಸ್ತಿ ವಿಜೇತ ತಂಡಕ್ಕೆ ₹ 50ಸಾವಿರ, ರನ್ನರ್‌ ಅಪ್‌ ತಂಡಕ್ಕೆ ₹ 30 ಸಾವಿರ ಹಾಗೂ ಮೂರನೇ ಸ್ಥಾನ ಪಡೆದ ತಂಡಕ್ಕೆ ₹ 10 ಸಾವಿರ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ₹ 6 ಸಾವಿರ ಹಾಗೂ ಐದನೇ ಸ್ಥಾನ ಪಡದ ತಂಡಕ್ಕೆ ₹ 4 ಸಾವಿರ ನಗದು ಹಾಗೂ ಎಲ್ಲ ತಂಡಗಳಿಗೂ ಟ್ರೋಫಿ, ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಪ್ರಜಾವಾಣಿಯು ದೀಕ್ಷಾ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ಕ್ವಿಜ್‌ ಚಾಂಪಿಯನ್‌ಷಿಪ್‌ ಏರ್ಪಡಿಸಿತ್ತು.

* ಪ್ರಶಸ್ತಿ ಗೆದ್ದಿದ್ದು ಸಹಜವಾಗಿಯೇ ಖುಷಿಯಾಗಿದೆ. ಕಠಿಣ ಪ್ರಶ್ನೆಗಳಿಗೆ ತರ್ಕಬದ್ಧ ಉತ್ತರಗಳನ್ನು ಹುಡುಕುವಾಗ ತುಂಭಾ ಖುಷಿಪಟ್ಟೆವು. ನಿತ್ಯವೂ ದಿನಪತ್ರಿಕೆಗಳನ್ನು ಓದಲು ಸಮಯ ಮೀಸಲಿಡುತ್ತಿದ್ದುದು ಈಗ ಫಲ ನೀಡಿದೆ.
–ಸಚಿತ್ ಸಿ. ಶೆಟ್ಟಿ ಹಾಗೂ ಕೌಶಿಕ್ ಎಸ್. ನಂದನ್, ಮೈಸೂರು ಕೌಟಿಲ್ಯ ವಿದ್ಯಾಲಯ ತಂಡ

* ಅಂತಿಮ ಸುತ್ತಿನ ಪ್ರಶ್ನೆಗಳು ನಿರೀಕ್ಷೆಗಿಂತಲೂ ಕಠಿಣವಾಗಿದ್ದವು. ದಿನಪತ್ರಿಕೆ ಓದುವ ಹವ್ಯಾಸ ನಮ್ಮ ಕೈಹಿಡಿಯಿತು. ಓದಿನ ವಿಸ್ತಾರ ತಿಳಿಯಿತು.

- ಧ್ರುಹಾನ್‌ ಶಾ ಮತ್ತು ಪ್ರಭಾವ್‌ ಶೆಟ್ಟಿ, ಲಿಟ್ಲ್‌ ರಾಕ್‌ ಇಂಡಿಯನ್‌ ಸ್ಕೂಲ್‌, ಬ್ರಹ್ಮಾವರ

* ಕ್ವಿಜ್ ಪೈಪೋಟಿಯಿಂದ ಕೂಡಿತ್ತು. ಸ್ವಲ್ಪ ಕಠಿಣವಾದ ಪ್ರಶ್ನೆಗಳಿದ್ದವು. ಕರ್ನಾಟಕದ ಬಗ್ಗೆ ಹೆಚ್ಚು ಗಮನವಿಟ್ಟು ಓದಿಕೊಂಡಿದ್ದು ನೆರವಿಗೆ ಬಂತು.

-ದಕ್ಷ್ ಎ. ಶೆಟ್ಟರ್‌, ಅನನ್ಯಾ ಪಾಟೀಲ ರಾವ್‌, ಪ್ರೆಸಿಡೆನ್ಸಿ ಶಾಲೆ, ಬೆಂಗಳೂರು

[object Object]
ಬೆಂಗಳೂರಿನಲ್ಲಿ ಗುರುವಾರ ನಡೆದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಕಂಡ ಸ್ಪರ್ಧಿಗಳ ವಿವಿಧ ಪ್ರತಿಕ್ರಿಯೆಗಳು -ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
[object Object]
ಬೆಂಗಳೂರಿನಲ್ಲಿ ಗುರುವಾರ ನಡೆದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸಭಿಕರಿಗೆ ಪ್ರಶ್ನೆ ಸಿಕ್ಕಾಗ ಉತ್ತರಿಸಲು ತಾ ಮುಂದು ತಾಮುಂದು ಎಂದು ಕೈ ಎತ್ತುತ್ತಿರುವ ವಿದ್ಯಾರ್ಥಿಗಳು
[object Object]
ಬೆಂಗಳೂರಿನಲ್ಲಿ ಗುರುವಾರ ನಡೆದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಕಂಡ ಸ್ಪರ್ಧಿಗಳ ವಿವಿಧ ಪ್ರತಿಕ್ರಿಯೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT