ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2032ರ ಒಲಿಂಪಿಕ್‌ ಕ್ರೀಡಾಕೂಟದ ಆತಿಥ್ಯಕ್ಕೆ ಬಿಡ್‌ ಸಲ್ಲಿಸಲು ಭಾರತ ನಿರ್ಧಾರ

Last Updated 2 ಜೂನ್ 2018, 14:47 IST
ಅಕ್ಷರ ಗಾತ್ರ

ನವದೆಹಲಿ: 2032 ರಲ್ಲಿ ನಡೆಯಬೇಕಿರುವ ಒಲಿಂಪಿಕ್‌ ಕ್ರೀಡಾಕೂಟ ಸೇರಿದಂತೆ ಪ್ರಮುಖ ನಾಲ್ಕು ಜಾಗತಿಕ ಕ್ರೀಡಾಕೂಟಗಳ ಆತಿಥ್ಯ ವಹಿಸಲು ಆಸಕ್ತಿ ಪತ್ರ ಸಲ್ಲಿಸುವುದಾಗಿ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) ಹೇಳಿದೆ.

ಈ ನಿರ್ಧಾರವನ್ನು ಪರಿಗಣಿಸಿ ಹೆಚ್ಚಿನ ಪದಕಗಳನ್ನು ಗೆಲ್ಲುವಂತೆ ಐಒಎ ನರೀಂದರ್‌ ಬಾತ್ರಾ ಒತ್ತಾಯಿಸಿದ್ದಾರೆ.

2021ರಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸಮ್ಮೇಳನ ಸೇರಿದಂತೆ, 2026ರ ಯುವ ಒಲಿಂಪಿಕ್‌ ಕ್ರೀಡಾಕೂಟ, 2030ರಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಮತ್ತು 2032 ರಲ್ಲಿ ನಡೆಯಬೇಕಿರುವ ಒಲಿಂಪಿಕ್‌ ಕ್ರೀಡಾಕೂಟಗಳ ಆತಿಥ್ಯ ವಹಿಸಲು ಆಸಕ್ತಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ.

ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿನ ಭಾರತ ತಂಡದ ಪ್ರದರ್ಶನವನ್ನು ಪರಿಶೀಲಿಸಲಾಗಿದ್ದು, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಹೊಂದಿರು ಸಮಸ್ಯೆಗಳನ್ನು ಪರಿಹರಿಸಲು ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ.

ಇದೇ ವೇಳೆ ಆಗಸ್ಟ್‌ನಲ್ಲಿ ಜಕಾರ್ತಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌–2018 ಕ್ರೀಡಾಕೂಟಕ್ಕೆ ಹೆಸರು ನೊಂದಾಯಿಸಲಾಗಿರುವ 1,938 ಅಥ್ಲೀಟ್‌ಗಳು, 399 ಸಿಬ್ಬಂದಿ, 8 ಮಂದಿ ಐಒಎ ಅಧಿಕಾರಿಗಳು, 7 ಜನ ಕ್ರೀಡಾ ಸಚಿವಾಲಯದ ಅಧಿಕಾರಿಗಳು ಮತ್ತು 18 ಜನ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡ 2370 ಜನರ ಪಟ್ಟಿಯನ್ನೂ ಪ್ರಕಟಿಸಲಾಯಿತು.

ಅಂತಿಮ ಪಟ್ಟಿಯನ್ನು ಜೂನ್‌ 30ಕ್ಕೆ ಪ್ರಕಟಿಸಲಾಗುತ್ತದೆ.

‘ಏಷ್ಯನ್ ಗೇಮ್ಸ್‌–2018 ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುವ ಸ್ಪರ್ಧಿಗಳ ಅಂತಿಮ ಪಟ್ಟಿಯನ್ನು ಆಯೋಜಕರಿಗೆ ಕಳುಹಿಸಿಕೊಡಲಾಗುವುದು’ ಎಂದೂ ಬಾತ್ರಾ ಹೇಳಿದ್ದಾರೆ.

2010ರಲ್ಲಿ ಆಯೋಜಿಸಲಾಗಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಇದು ದೇಶದಲ್ಲಿ ಆಯೋಜನೆಯಾದ ಕೊನೆಯ ಜಾಗತಿಕ ಕ್ರೀಡಾಕೂಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT