ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಾದಿಗೆ ದೀಪಾ

Last Updated 5 ಜನವರಿ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ರಿಯೊ ಒಲಿಂಪಿಕ್ಸ್‌ನಲ್ಲಿ ಗಮನ ಸೆಳೆದು ನಂತರ ಗಾಯದ ಸಮಸ್ಯೆಯಿಂದ ಬಳಲಿದ ಜಿಮ್ನಾಸ್ಟ್ ದೀಪಾ ಕರ್ಮಾಕರ್‌ ಇದೀಗ ಸಾಧನೆಯ ಹಾದಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಅತ್ಯಮೋಘ ಸಾಮರ್ಥ್ಯ ತೋರಿದ ಕರ್ಮಾಕರ್‌ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ದಿಂದ ವಂಚಿತರಾಗಿದ್ದರು. ತ್ರಿಪುರದ ಈ ಜಿಮ್ನಾಸ್ಟ್‌ ಫ್ಲೋರ್ ಎಕ್ಸೈಸ್‌ನಲ್ಲಿ ತೊಡಗಿದ್ದಾಗ ಗಾಯಗೊಂಡು 2017ರ ಪೂರ್ತಿ ‘ನೋವಿನಲ್ಲಿ’ ನರಳಿದ್ದರು. ಆದರೂ ಛಲ ಬಿಡದ ಅವರು ಗುಣಮುಖರಾ ಗುತ್ತಿದ್ದಂತೆ ಸಾಧನೆ ಮಾಡಲು ಮುಂದಾಗಿದ್ದಾರೆ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ‘ಹ್ಯಾಂಡ್ ಸ್ಪ್ರಿಂಗ್‌ 540’ ಎಂಬ ಹೊಸ ವಿಧಾನದ ಮೂಲಕ ಮಿಂಚುವ ಭರವಸೆಯಲ್ಲಿದ್ದಾರೆ.

‘ಹ್ಯಾಂಡ್ ಸ್ಪ್ರಿಂಗ್‌ 540 ಎಂಬುದು ವಿಶಿಷ್ಟ ಮಾದರಿ. ಇದರಲ್ಲಿ ದೇಹವನ್ನು ಮಿತಿಗಿಂತ ಹೆಚ್ಚು ಬಳುಕಿಸಲಾಗುತ್ತದೆ. ಇದರಲ್ಲಿ ಉನ್ನತ ಸಾಧನೆ ಮಾಡುವ ಭರವಸೆ ಇದೆ’ ಎಂದು ದೀಪಾ ಭರವಸೆ ವ್ಯಕ್ತಪಡಿಸಿದರು.

‘ಕ್ರೀಡೆಯಿಂದ ದೂರ ಉಳಿಯು ವುದು ತುಂಬ ಕಷ್ಟ. ಗಾಯದ ಸಂದರ್ಭ ದಲ್ಲಿ ನನ್ನ ಸಹವರ್ತಿಗಳು ಅಭ್ಯಾಸ ಮಾಡುತ್ತಿದ್ದರೆ ನಾನು ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದೆ. ವಿಶ್ವ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇದ್ದುದರಿಂದ ದುಖವಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT