ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಗೆ ನಡಾಲ್‌

Last Updated 21 ಜನವರಿ 2018, 19:44 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಎರಡನೇ ಸೆಟ್‌ನಲ್ಲಿ ಹಿನ್ನಡೆ ಕಂಡರೂ ಚೇತರಿ ಸಿಕೊಂಡ ಸ್ಪೇನ್‌ನ ರಫೆಲ್ ನಡಾಲ್ ತಮ್ಮ ಎದುರಾಳಿಯನ್ನು ಮಣಿಸಿದರು. ಈ ಮೂಲಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾ ಗದ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್ ಹಂತಕ್ಕೆ ಪ್ರವೇಶಿಸಿದರು. ಮಹಿಳಾ ವಿಭಾಗದಲ್ಲಿ ಸುಲಭ ಗೆಲುವು ಸಾಧಿಸಿದ ಡೆನ್ಮಾರ್ಕ್‌ನ ಕರೊಲಿನ್ ವೋಜ್ನಿಯಾಕಿ ಎಂಟರ ಘಟ್ಟಕ್ಕೆ ಕಾಲಿಟ್ಟರು.

ರಾಡ್‌ ಲೆವರ್ ಅಂಗಳದಲ್ಲಿ ಭಾನುವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಕ್ರೊವೇಷಿಯಾದ ಮರಿನ್ ಸಿಲಿಕ್‌, ಬಲ್ಗೇರಿಯಾದ ಗ್ರೆಗರ್ ದಿಮಿಟ್ರೊವ್‌ ಮತ್ತು ಬ್ರಿಟನ್‌ನ ಕೈಲ್ ಎಡ್ಮಂಡ್ ಪುರುಷರ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು. ಮಹಿಳಾ ವಿಭಾಗದಲ್ಲಿ ಸ್ಪೇನ್‌ನ ಕಾರ್ಲಾ ಸ್ವಾಜ್‌ ಹಾಗೂ ಬೆಲ್ಜಿಯಂನ ಎಲಿಸ್‌ ಮಾರ್ಟೆನ್ಜ್ ಕ್ವಾರ್ಟರ್‌ ಫೈನಲ್ ಪ್ರವೇಶದ ಕನಸು ನನಸು ಮಾಡಿಕೊಂಡರು.

ರಫೆಲ್ ನಡಾಲ್ ಮತ್ತು ಅರ್ಜೆಂಟೀ ನಾದ ಡಿಗೊ ಸ್ವಾಜ್‌ಮನ್‌ ನಡುವಿನ ಪಂದ್ಯ ರೋಚಕವಾಗಿತ್ತು. ಮೊದಲ ಶ್ರೇಯಾಂಕದ ನಡಾಲ್‌ ವಿರುದ್ಧ ಮೊದಲ ಸೆಟ್‌ನಲ್ಲಿ 3–6ರಿಂದ ಸೋತ ಡಿಯೇಗೊ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು.

24ನೇ ಶ್ರೇಯಾಂಕದ ಡಿಯೇಗೊ 7–6 (7/4)ರಲ್ಲಿ ಎರಡನೇ ಸೆಟ್‌ ತಮ್ಮದಾಗಿಸಿಕೊಂಢರು. ಆದರೆ ನಂತರದ ಎರಡು ಸೆಟ್‌ಗಳಲ್ಲಿ 6–3, 6–3ರ ಜಯಿಸಿದ ನಡಾಲ್‌ ಮುಂದಿನ ಹಂತಕ್ಕೆ ಪ್ರವೇಶಿಸಿದರು.

ಆರನೇ ಶ್ರೇಯಾಂಕದ ಮರಿನ್ ಸಿಲಿಕ್‌ಗೆ 10ನೇ ಶ್ರೇಯಾಂಕದ ಆಟಗಾರ ಸ್ಪೇನ್‌ನ ಪ್ಯಾಬ್ಲೊ ಕರೆನೊ ಬೂಸ್ತ ಪ್ರಬಲ ಪೈಪೋಟಿ ನೀಡಿದರು. ಅಂತಿಮವಾಗಿ ಮರಿನ್‌ 6–7 (2/7), 6–3, 7–6 (7/0), 7–6 (7/3) ರಿಂದ ಗೆದ್ದರು. ಮೂರನೇ ಶ್ರೇಯಾಂಕದ ಗ್ರೆಗರ್ ಡಿಮಿಟ್ರೊವ್‌ ಆಸ್ಟ್ರೇಲಿಯಾದ, 17ನೇ ಶ್ರೇಯಾಂಕಿತ ಆಟಗಾರ ನಿಕ್ ಕಿರ್ಗಿಯೊಸ್ ವಿರುದ್ಧ ಗೆಲ್ಲಲು ಬಹಳ ಸಾಹಸಪಡಬೇಕಾಯಿತು. 7–6 (7/3), 7–6 (7/4), 4–6, 7–6 (7/4) ಸೆಟ್‌ಗಳಿಂದ ಗ್ರೆಗರ್ ಗೆದ್ದರು.

ಎಡ್ಮಂಡ್‌ಗೆ ಮೊದಲ ಕ್ವಾರ್ಟರ್ ಫೈನಲ್‌
ಇಟಲಿಯ ಆ್ಯಂಡ್ರೀಸ್ ಸೆಪ್ಪಿ ವಿರುದ್ಧ 6–7 (4/7), 7–5, 6–2, 6–3ರಿಂದ ಗೆಲುವು ಸಾಧಿಸಿದ ಕೈಲ್ ಎಡ್ಮಂಡ್‌ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಅವರು ಗ್ರೆಗರ್ ಡಿಮಿಟ್ರೊವ್‌ ಅವರನ್ನು ಎದುರಿಸುವರು. ಅ್ಯಂಡಿ ಮರ್ರೆ ಗಾಯಗೊಂಡು ಹಿಂದೆ ಸರಿದ ಕಾರಣ ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಬ್ರಿಟನ್‌ನ ಏಕೈಕ ಆಟಗಾರ ಎಡ್ಮಂಡ್‌.

ಮಹಿಳಾ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಕಾರ್ಲಾ ಸೌರೆಜ್‌ 4–6, 6–4, 8–6ರಿಂದ ಅನೆಟ್‌ ಕೊಂತವೇಟ್‌ ಅವರನ್ನು, ಕರೊಲಿನ್‌ ವೋಜ್ನಿಯಾಕಿ 6–3, 6–0ಯಿಂದ ಸ್ಲೊವಾಕಿಯಾದ ಮಗ್ದಲಿನಾ ರೈಬರಿಕೋವ ಅವರನ್ನು, ಎಲಿಸ್‌ ಮೆರ್ಟೆನ್ಜ್‌ 7–6 (7/5), 7–5ರಿಂದ ಕ್ರೊವೇಷಿಯಾದ ಪೆಟ್ರಾ ಮಾರ್ಟಿಕ್ ಅವರನ್ನು ಸೋಲಿಸಿದರು.

ಬೋಪಣ್ಣ ಜೋಡಿಗೆ ಮುನ್ನಡೆ
ಮೆಲ್ಬರ್ನ್‌:
ಭಾರತದ ಲಿಯಾಂಡರ್ ಪೇಸ್‌ ಮತ್ತು ಪುರವ್‌ ರಾಜಾ ಜೋಡಿ ಪುರುಷರ ಡಬಲ್ಸ್ ವಿಭಾಗದ ನಾಲ್ಕನೇ ಸುತ್ತಿನಲ್ಲಿ ಸೋತರೆ ರೋಹನ್ ಬೋಪಣ್ಣ ಮತ್ತು ಹಂಗೆರಿಯ ಟಿಮಿಯಾ ಬಾಬೋಸ್ ಜೋಡಿ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಆಸ್ಟ್ರೇಲಿಯಾದ ಆ್ಯಂಡ್ರ್ಯೂ ವಿಟಿಂಗ್ಟನ್‌ ಮತ್ತು ಎಲೆನ್ ಪೆರಜ್‌ ಜೋಡಿಯನ್ನು ಬೋಪಣ್ಣ–ಟಿಮಿಯಾ 6–2, 6–4ರಿಂದ ಮಣಿಸಿದರು.

ಪೇಸ್‌–ಪುರವ್ ಜೋಡಿಯನ್ನು ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್‌ ಕಬಾಲ್ ಮತ್ತು ರಾಬರ್ಟ್‌ ಫರಾ 6–1, 6–2ರಿಂದ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT