ಬೆಂಗಳೂರು: ಹರ್ಷವರ್ಧನ್ ಹಾಗೂ ರೇಷ್ಮಾ ಮುರಾರಿ ಇಲ್ಲಿ ನಡೆಯುತ್ತಿರುವ ಕೆಟಿಪಿಪಿಎ ವತಿಯ ಎಂ.ಪಿ ಪ್ರಕಾಶ್ ಸ್ಮಾರಕ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಟೆಂಪಲ್ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹರ್ಷವರ್ಧನ್ 2–6, 6–3, 7–5ರಲ್ಲಿ ಸಾಯಿಶರಣ್ ರೆಡ್ಡಿ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ನಿಖಿತ್ ರೆಡ್ಡಿ 6–4, 7–5ರಲ್ಲಿ ಎರಡನೇ ಶ್ರೇಯಾಂಕದ ರಿಷಿ ರೆಡ್ಡಿಗೆ ಸೋಲುಣಿಸಿದರು. ಪೃಥ್ವಿ ಶೇಖರ್ 6–1, 6–4ರಲ್ಲಿ ಸತ್ಯಾ ಮೇಲೂ, ವಿಜ್ಞೇಶ್ ವೀರಭದ್ರನ್ 6–1, 6–7, 6–0ಯಲ್ಲಿ ನೇತ್ರವ್ ಶ್ರೀನಿವಾಸನ್ ವಿರುದ್ಧವೂ, ಬಿ.ಆರ್.ನಿಕ್ಷೇಪ್ 6–2, 6–3ರಲ್ಲಿ ಸಿದ್ದಾರ್ಥ್ ಆರ್ಯ ಎದುರೂ, ಗುಹಾ ರಾಜನ್ 6–1, 6–0ರಲ್ಲಿ ಅಚಿಂತ್ ಭಗತ್ ಎದುರೂ, ಕೆ.ಎಸ್.ಧೀರಜ್ 6–3, 6–4ರಲ್ಲಿ ಎಮ್.ವಿ ಸಂದೀಪ್ ವಿರುದ್ಧವೂ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.