ಮಂಗಳೂರು: ಆಂಧ್ರಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಮಹಿಳಾ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಮಂಗಳೂರು ವಿವಿ 4ನೇ ಬಾರಿ ಚಾಂಪಿಯನ್ ಆಗಿದೆ.
ಕ್ವಾರ್ಟರ್ ಫೈನಲ್ನಲ್ಲಿ ಮಂಗಳೂರು ವಿವಿ ತಂಡವು ಮದುರೈ ಕಾಮರಾಜ್ ವಿವಿ ತಂಡದ ವಿರುದ್ಧ 35-16, 35-16 ಸೇಟ್ಗಳ ಅಂತರದಿಂದ ಸೋಲಿಸಿ ಅಖಿಲ ಭಾರತ ವಿವಿ ಚಾಂಪಿಯನ್ಷಿಪ್ನ ಲೀಗ್ ಹಂತಕ್ಕೆ ಅರ್ಹತೆ ಪಡೆಯಿತು.
ಲೀಗ್ ಹಂತದ ಪಂದ್ಯಗಳಲ್ಲಿ ಮಂಗಳೂರು ವಿವಿ ತಂಡವು ತಮಿಳುನಾಡಿನ ಎಸ್ಆರ್ಎಂ ವಿವಿ ತಂಡದ ವಿರುದ್ಧ 35-31, 35-28 ಅಂತರದಲ್ಲಿ ಗೆಲುವು ಸಾಧಿಸಿತು.
2ನೇ ಲೀಗ್ ಪಂದ್ಯದಲ್ಲಿ ಮದ್ರಾಸ್ ವಿವಿ ವಿರುದ್ಧ 35-24, 35-20 ಅಂಕಗಳ ಜಯ ಸಾಧಿಸಿತು.
ಅಂತಿಮ ಹಂತದ ಲೀಗ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು ಚೆನ್ನೈನ ಬಿಎಸ್ಎಆರ್ ವಿವಿ ತಂಡದ ವಿರುದ್ಧ 35-28, 35-17 ನೇರ್ ಸೆಟ್ಗಳ ಅಂತರದ ಗೆಲುವು ಸಾಧಿಸಿತು.
ರಾಷ್ಟ್ರದ ಸುಮಾರು 74 ವಿವಿ ತಂಡಗಳು ಈ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ್ದು, ಮಂಗಳೂರು ವಿ.ವಿ. ತಂಡದ ನೇತೃತ್ವವನ್ನು ಸ್ಟಾರ್ ಆಫ್ ಇಂಡಿಯಾ ಆಟಗಾರ್ತಿ ಜಯಲಕ್ಷ್ಮೀ ವಹಿಸಿದ್ದರು.