ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಜಾದ್‌ ಶತಕ: ಅಫ್ಗಾನಿಸ್ತಾನ ಜಯಭೇರಿ

Last Updated 22 ಮೇ 2019, 18:25 IST
ಅಕ್ಷರ ಗಾತ್ರ

ಬೆಲ್‌ಫಾಸ್ಟ್‌: ಮುಹಮ್ಮದ್‌ ಶಹಜಾದ್‌ ಅವರ ಶತಕದ ನೆರವಿನಿಂದ ಅಫ್ಗಾನಿಸ್ತಾನ ತಂಡ ಐರ್ಲೆಂಡ್‌ ತಂಡವನ್ನು ಮಂಗಳವಾರ 126 ರನ್‌ಗಳ ಅಂತರದಿಂದ ಮಣಿಸಿದೆ. ಆ ಮೂಲಕ ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಫ್ಗಾನಿಸ್ತಾನ ತಂಡದ ಪರ ಶಹಜಾದ್‌ ಹಾಗೂ ರಹಮತ್‌ ಶಾ ಎರಡನೇ ವಿಕೆಟ್ ಜೊತೆಯಾಟದಲ್ಲಿ 150 ರನ್‌ ಗಳಿಸಿದರು. ನಜೀಬುಲ್ಲಾ ಜದ್ರಾನ್‌ 33 ಎಸೆತಗಳಲ್ಲಿ ಭರ್ಜರಿ 60 ರನ್‌ ಗಳಿಸಿ ಮಿಂಚಿದರು. ಅಪ್ಗಾನಿಸ್ತಾನ ತಂಡವು ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 305 ರನ್‌ ಗಳಿಸಿತು.

ಆ ಬಳಿಕ ಗುಲ್ಬದಿನ್‌ ನೈಬ್‌ ಅವರ ಭರ್ಜರಿ ಬೌಲಿಂಗ್‌ (43ಕ್ಕೆ 6) ನೆರವಿನಿಂದ ಐರ್ಲೆಂಡ್‌ ತಂಡವನ್ನು ಅಫ್ಗಾನಿಸ್ತಾನ ತಂಡವು 179 ರನ್‌ಗೆ ಕಟ್ಟಿಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT